ದುಬೈ: ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪ್ರಥಮ ಸೆಮಿಫೈನಲ್ನಲ್ಲಿ ಭಾರತ ಇಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವು ತನ್ನ ಸ್ಪಿನ್ ಬೌಲರ್ಗಳ ಬಲವನ್ನು ನೆಚ್ಚಿಕೊಂಡಿದ್ದು, ಬಲಾಢ್ಯ ಆಸ್ಟ್ರೇಲಿಯಾವನ್ನು ಮಣಿಸುವ ಉತ್ಸಾಹದಲ್ಲಿದೆ. ಗ್ರೂಪ್ ಹಂತದಲ್ಲಿ ಭಾರತ ಒಂದೂ ಪಂದ್ಯ
ಸೋಲದೆ ಅಜೇಯರಾಗಿ ಸೆಮಿಫೈನಲ್ಗೆ ಏರಿದೆ.
ಆಸ್ಟ್ರೇಲಿಯಾ ತಂಡಕ್ಕೆ ಪ್ರಮುಖ ವೇಗಿಗಳಾದ ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರು ಲಭ್ಯವಿಲ್ಲ. ಗಾಯಗೊಂಡಿರುವ ಅವರು ಕಣಕ್ಕಿಳಿದಿಲ್ಲ. ಆದರೂ ಆಸ್ಟ್ರೇಲಿಯಾವು ಈ ಸವಾಲನ್ನು ಮೀರಿ ನಿಂತಿದೆ.14 ವರ್ಷಗಳ ನಂತರ ಆಸ್ಟ್ರೇಲಿಯಾ ಎದುರು ಜಯಿಸಿ ಫೈನಲ್ಗೆ ಮುನ್ನಡೆಯುವ ಛಲದಲ್ಲಿ ರೋಹಿತ್ ಶರ್ಮಾ ಬಳಗವಿದೆ. ನುರಿತ ಸ್ಪಿನ್ನರ್ಗಳು ಇರುವ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಕಠಿಣ ಪೈಪೋಟಿಯೊಡ್ಡುವ ಸಾಧ್ಯತೆಯಿದೆ.ರೋಹಿತ್ ಶರ್ಮಾ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಅವರು ಫಾರ್ಮ್ನಲ್ಲಿ ಇರುವುದು ನಿರೀಕ್ಷೆ ಹೆಚ್ಚಿಸಿದೆ.ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ನಾಯಕ ಸ್ಟೀವ್ ಸ್ಮಿತ್, ಜೋಷ್ ಇಂಗ್ಲಿಸ್ ಅವರು ಉತ್ತಮ ಲಯದಲ್ಲಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 2.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಜಿಯೊ ಹಾಟ್ಸ್ಟಾರ್ ಆ್ಯಪ್