ಸುಳ್ಯ: ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರಾಗಿ ಪಿ.ಬಿ.ಸುಧಾಕರ ರೈ ಪುನರಾಯ್ಕೆಯಾಗಿದ್ದಾರೆ.
ವರ್ತಕರ ಸಂಘದ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ

ನಡೆಯಿತು. ಪ್ರಧಾನ ಕಾರ್ಯದರ್ಶಿಯಾಗಿ ಡಿ.ಎಸ್. ಗಿರೀಶ್ ಪುನರಾಯ್ಕೆಯಾದರು. ಕೋಶಾಧಿಕಾರಿಯಾಗಿ ಹೇಮಂತ್ ಕಾಮತ್, ಉಪಾಧ್ಯಕ್ಷರುಗಳಾಗಿ ಪಿ.ರಾಮಚಂದ್ರ ಆಗ್ರೋ, ಸಿ.ಎ. ಗಣೇಶ್ ಭಟ್, ಆದಂ ಕುಂಞಿ ಕಮ್ಮಾಡಿ, ಪ್ರಭಾಕರನ್ ನಾಯರ್, ಅಬ್ದುಲ್ ಹಮೀದ್ ಜನತಾ,

ಜತೆ ಕಾರ್ಯದರ್ಶಿ ಗಳಾಗಿ ಅಬ್ದುಲ್ ರಹಮಾನ್ ಎಸ್.ವೈ, ಲತಾ ಪ್ರಸಾದ್ ಕುದ್ಪಾಜೆ, ನಿರ್ದೇಶಕರುಗಳಾಗಿ ಎಂ.ಸುಂದರ್ ರಾವ್, ಧರ್ಮಪಾಲ ಕೆ.ಎಸ್., ಶ್ಯಾಮ್ ಪ್ರಸಾದ್ ಅಡ್ಡಂತಡ್ಕ, ಟಿ.ಎಂ. ಖಾಲಿದ್, ಜಗನ್ನಾಥ ರೈ ಪಿ, ಎಸ್.ಅಬ್ದುಲ್ ಕಟ್ಟೆಕ್ಕಾರ್, ರಮೇಶ್ ಶೆಟ್ಟಿ, ಅನೂಪ್ ಕೆ.ಜೆ., ಯು.ಪಿ. ಬಶೀರ್, ಸ್ಯಾನ್ ಸಿಂಗ್, ಆದಿತ್ಯ ಹಿಮಗಿರಿ ಆಯ್ಕೆಯಾಗಿದ್ದಾರೆ. 2014 ರಿಂದ ವರ್ತಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸುಧಾಕರ ರೈ ಈ ಹಿಂದೆ ಸಂಘದ ಪ್ರಧಾನ ಕಾರ್ಯದರ್ಶಿ ಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.