ಬೆಂಗಳೂರು: ಸಿಇಟಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಮಲ್ಲಸಂದ್ರದ ಶ್ರೀ ಕುಮಾರನ್ಸ್ ಕಾಲೇಜಿನ ವಿಘ್ನೇಶ್ ನಟರಾಜ್ ಕುಮಾರ್ ಪ್ರಥಮ ರ್ಯಾಂಕ್ ಪಡೆದರೆ ಬೆಂಗಳೂರಿನ ಆರ್ವಿ ಕಾಲೇಜಿನ ಅರುಣ್ ಕೃಷ್ಣಮೂರ್ತಿ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರ್ ಫಲಿತಾಂಶ ಪ್ರಕಟಿಸಿದರು. ಈ ವೇಳೆ ಉನ್ನತ ಶಿಕ್ಷಣ ಇಲಾಖೆಯ
ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯ ಉಪಸ್ಥಿತರಿದ್ದರು. ಒಟ್ಟು 2,61,610 ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಈ ಪೈಕಿ 2,44,345 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿರಾಗಿದ್ದರು.
ಇಂಜಿನಿಯರಿಂಗ್ ಕೋರ್ಸಿಗೆ 2,03,381 ರ್ಯಾಂಕ್ ನೀಡಲಾಗಿದೆ. ಕೃಷಿ ವಿಜ್ಞಾನ ಕೋರ್ಸುಗಳಿಗೆ 1,64,187 ವಿದ್ಯಾರ್ಥಿಗಳು, ಪಶುಸಂಗೋಪನೆಗೆ 1,66,756 ವಿದ್ಯಾರ್ಥಿಗಳು, ಯೋಗ ಮತ್ತು ನ್ಯಾಚುರೋಪತಿಗೆ 2,06,191 ವಿದ್ಯಾರ್ಥಿಗಳು ಬಿ. ಫಾರ್ಮ ಕೋರ್ಸಿಗೆ ಮತ್ತು ಫಾರ್ಮ-ಡಿ ಕೋರ್ಸಿಗೆ 2,06,340 ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿರುತ್ತಾರೆ. ಬಿ.ಎಸ್.ಸಿ (ನರ್ಸಿಂಗ್) ಕೋರ್ಸಿಗೂ ಸಹ ಸಿಇಟಿ ನಡೆಸಲಾಗಿದ್ದು, ಒಟ್ಟು 1,66,808 ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳು ಪ್ರಾಧಿಕಾರದ ವೆಬ್ಸೈಟ್ http://kea.kar.nic.in ಮೂಲಕ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.