ಸುಳ್ಯ: ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಸುಳ್ಯ ತಾಲೂಕು ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ (ಸಿಡಿಪಿಒ) ಹಿರಿಯ ಮೇಲ್ವಿಚಾರಕಿ ಶೈಲಜಾ ದಿನೇಶ್ ಕುಕ್ಕುಜಡ್ಕ ಅಧಿಕಾರ ವಹಿಸಿಕೊಂಡಿದ್ದಾರೆ. ಸುಳ್ಯ ಸಿಡಿಪಿಒ ಆಗಿದ್ದ
ರಶ್ಮಿ ಅಶೋಕ್ ನೆಕ್ರಾಜೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿಯಾಗಿ ಪದನ್ನೋತಿ ಹೊಂದಿ ವರ್ಗಾವಣೆಯಾಗಿರುವ ಹಿನ್ನಲೆಯಲ್ಲಿ ಶೈಲಜಾ ಅವರಿಗೆ ಪ್ರಭಾರ ವಹಿಸಲಾಗಿದೆ. 2004 ರಲ್ಲಿ ಪುತ್ತೂರು ಸಿಡಿಪಿಒ ಕಚೇರಿಯಲ್ಲಿ ಮೇಲ್ವಿಚಾರಕಿಯಾಗಿ ಸೇವೆಗೆ ಸೇರಿದ ಇವರು 2009ರಲಲ್ಲಿ ಸುಳ್ಯ ಸಿಡಿಪಿಒ ಕಚೇರಿಗೆ ವರ್ಗಾವಣೆಗೊಂಡು ಬಂದರು. 2022 ರಲ್ಲಿ ಹಿರಿಯ ಮೇಲ್ವಿಚಾರಕರಾಗಿ ಪದೋನ್ನತಿ ಹೊಂದಿದ್ದರು.