ಕಾಸರಗೋಡು:ಕೇರಳ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸೋಮವಾರ(ಮಾ. 23) ಅಂತಿಮ ದಿನವಾಗಿದ್ದು, ಇಂದು ಜಿಲ್ಲೆಯಲ್ಲಿ ಅಭ್ಯರ್ಥಿಗಳ ನಾಮ ಪತ್ರ ಸಲ್ಲಿಕೆ ಬಿರುಸಿನಿಂದ ನಡೆದಿದೆ.ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್ಡಿಎ ಮತ್ತು ಎಲ್ಡಿಎಫ್ ಅಭ್ಯರ್ಥಿಗಳು
ಇಂದು ನಾಮ ಪತ್ರ ಸಲ್ಲಿಸಿದರು.ಎನ್ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ತೆರಳಿ, ಪ್ರಾರ್ಥನೆ ಸಲ್ಲಿಸಿ ಬಳಿಕ ಉಪ್ಪಳ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.ಎಡರಂಗದ ಅಭ್ಯರ್ಥಿ ಕೆ. ಆರ್. ಜಯಾನಂದ, ಉದುಮ ಎಡರಂಗದ ಅಭ್ಯರ್ಥಿ ಸಿ. ಎಚ್. ಕುಂಞಂಬು, ಕಾಞಂಗಾಡು ಎಡರಂಗದ ಅಭ್ಯರ್ಥಿ ಗೋವಿಂದನ್ ಪಳ್ಳಿಕಾಪಿಲ್, ತ್ರಿಕರಿಪುರ ಎಡರಂಗದ ಅಭ್ಯರ್ಥಿ ಪಿಪಿಪಿ ಮುಸ್ತಫಾ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಉದುಮದಲ್ಲಿ ಸ್ಪರ್ಧಿಸುವ ಯುಡಿಎಫ್ ಅಭ್ಯರ್ಥಿ ಕೆ. ನೀಲಕಂಠನ್ ಇಂದು ನಾಮಪತ್ರ ಸಲ್ಲಿಸಿದರು. ಉದುಮ ಎನ್ಡಿಎ ಅಭ್ಯರ್ಥಿ ಎಂ.ಬಲ್ರಾಜ್ ಇಂದು ನಾಮಪತ್ರ ಸಲ್ಲಿಸಿದರು.














