ಸುಳ್ಯ: ಸುಳ್ಯ ಸಿಎ ಬ್ಯಾಂಕ್ ಆಡಳಿತ ಮಂಡಳಿಗೆ ಡಿ.31ರಂದು ನಡೆಯಲಿರುವ ಚುನಾವಣೆಯಲ್ಲಿ ಸಹಕಾರಿ ರಂಗದ ಅಭ್ಯರ್ಥಿಯಾಗಿ ಕರುಣಾಕರ ಅಡ್ಪಂಗಾಯ ನಾಮಪತ್ರ ಸಲ್ಲಿಸಿದ್ದಾರೆ. ಸಿಎ ಬ್ಯಾಂಕ್ ಮಾಜಿ ಉಪಾಧ್ಯಕ್ಷರು ಹಾಗೂ ಬಿಜೆಪಿ ಜಾಲ್ಸೂರು ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷರೂ ಆದ ಕರುಣಾಕರ ಅಡ್ಪಂಗಾಯ ಅವರು ಈ ಬಾರಿ
ಸಹಕಾರ ರಂಗದ ಅಭ್ಯರ್ಥಿಯಾಗಿ ಸಾಲಗಾರರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಸಹಕಾರಿ ರಂಗದ ಅಭ್ಯರ್ಥಿಗಳಾಗಿ
ಪ್ರವರ್ಗ ಬಿ ಕ್ಷೇತ್ರದಿಂದ ವಿಜಯಕುಮಾರ ಪಡ್ಪು, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಜಯಂತಿ ಕೊಯಿಕುಳಿ, ಎಸ್ಟಿ ಕ್ಷೇತ್ರದಿಂದ ವಿಶ್ವನಾಥ ನೆಲ್ಲಿಬಂಗಾರಡ್ಕ ಕುರುಂಜಿಭಾಗ್, ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ರಾಮಪಚಂದ್ರ ಪೆಲ್ತಡ್ಕ ಜಟ್ಟಿಪಳ್ಳ, ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಶಶಿಧರ ಶಿರಾಜೆ, ಸಾಲಗಾರರಲ್ಲದ ಕ್ಷೇತ್ರದಿಂದ ಲತೀಕುಮಾರ್ ರಾವ್ ಕೆ.ಪಿ, ಪ್ರವರ್ಗ ಎ ಕ್ಷೇತ್ರದಿಂದ ರಾಮಣ್ಣಪೂಜಾರಿ ಪೊಡುಂಬ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಕೆ.ಗೋಕುಲ್ದಾಸ್, ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ, ಶಶಿಧರ ಎಂ.ಜೆ, ಜಯಪ್ರಕಾಶ್ ನೆಕ್ರಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.












