ಸುಳ್ಯ:ಕೇರಳದ ಕ್ಯಾಲಿಕಟ್ ಸಂಸದ ಹಾಗೂ ಕಾಂಗ್ರೆಸ್ ಪಾರ್ಲಿಮೆಂಟ್ರಿ ಕಾರ್ಯದರ್ಶಿ ಎಂ.ಕೆ.ರಾಘವನ್ ಅವರು ಇಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಸುಬ್ರಹ್ಮಣ್ಯ ತೆರಳುವ ಸಂದರ್ಭದಲ್ಲಿ ಪೈಚಾರ್ ಜಂಕ್ಷನ್ನಲ್ಲಿ ಸುಳ್ಯದ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್, ಪ್ರಮುಖರಾದ ಕೆ.ಗೋಕುಲ್ ದಾಸ್ , ಭವಾನಿಶಂಕರ ಕಲ್ಮಡ್ಕ, ಶಶಿಧರ್ ಎಂ.ಜೆ, ನಂದರಾಜ್ ಸಂಕೇಶ್, ಮೋಹಿತ್ ಹರ್ಲಡ್ಕ, ಸುರೇಶ್ ಕಂದಡ್ಕ, ಭೋಜಪ್ಪ ನಾಯ್ಕ, ಆರ್ ಬಿ ಬಶೀರ್, ಶರೀಫ್ ಕಂಠಿ, ಪದ್ಮನಾಭ ಹರ್ಲಡ್ಕ, ನಿತ್ಯಾನಂದ ಕುಡೆಂಬಿ ಅಬ್ದುಲ್ ರಜಾಕ್, ಮಂಜುನಾಥ ಮಡ್ತಿಲ, ಮೊದಲಾದವರು ಇದ್ದರು.






