ಸುಳ್ಯ: ಡಿ.31ರಂದು ನಡೆಯಲಿರುವ ಸುಳ್ಯ ಸಿಎ ಬ್ಯಾಂಕ್ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1991ರಿಂದ ಸಿಎ ಬ್ಯಾಂಕ್ನ ಆಡಳಿತ ನಡೆಸುತ್ತಿರುವ ಸಹಕಾರ ಭಾರತಿ ಸಿಎ ಬ್ಯಾಂಕನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದಿದೆ. ಬ್ಯಾಂಕನ್ನು ನಿರಂತರ ಲಾಭದಲ್ಲಿ
ಮುನ್ನಡೆಸಿ ತಾಲೂಕಿನಲ್ಲಿ ಅತೀ ಹೆಚ್ಚು ಡಿವಿಡೆಂಡ್ ನೀಡುವ ಬ್ಯಾಂಕ್ ಎಂಬ ಹೆಗ್ಗಳಿಕೆ ಗಳಿಸಿದೆ. ಅದೇ ರೀತಿ ಬ್ಯಾಂಕ್ನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಸಾಧಿಸಬೇಕಾಗಿದೆ ಎಂದು ಹೇಳಿದರು.
ಸಹಕಾರ ಭಾರತಿ ಅಭ್ಯರ್ಥಿಗಳು:
ಸಹಕಾರ ಭಾರತಿ ಅಭ್ಯರ್ಥಿಗಳ ಪಟ್ಟಿಯನ್ನು ಕಂಜಿಪಿಲಿ ಬಿಡುಗಡೆ ಮಾಡಿದರು. ಹಿರಿಯರು ಮತ್ತು ಹೊಸಬರನ್ನು ಒಳಗೊಂಡ ಸಮತೋಲನದ ತಂಡ ಕಣಕ್ಕೆ ಇಳಿಯಲಿದೆ ಎಂದರು.
ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕೇಶವ ಮಾಸ್ತರ್ ಹೊಸಗದ್ದೆ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಚಂದ್ರಶೇಖರ ಡಿ.ಕೆ.ದೊಡ್ಡೇರಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಹೇಮಂತ ಕಂದಡ್ಕ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಬಾಲಗೋಪಾಲ ಸೇರ್ಕಜೆ, ಮಹಿಳಾ ಕ್ಷೇತ್ರದಲ್ಲಿ ನವ್ಯಾ ಚಂದ್ರಶೇಖರ ಅಡ್ಪಂಗಾಯ, ಹರಿಣಾಕ್ಷಿ ಬೇಲ್ಯ, ಸಾಮಾನ್ಯ ಕ್ಷೇತ್ರದಿಂದ ಎನ್.ಎ.ರಾಮಚಂದ್ರ, ವೆಂಕಟ್ರಮಣ ಮುಳ್ಯ, ವಾಸುದೇವ ನಾಯಕ್ ಪಿ, ಶಿವರಾಮ ಕೇರ್ಪಳ, ವಿಕ್ರಮ್ ಅಡ್ಪಂಗಾಯ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಚಂದ್ರಶೇಖರ ನಡುಮನೆ ಸ್ಪರ್ಧಿಸಲಿದ್ದಾರೆ ಎಂದು ಹರೀಶ್ ಕಂಜಿಪಿಲಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ,ಸುಬೋದ್ ಶೆಟ್ಟಿ ಮೇನಾಲ, ವಿನಯಕುಮಾರ್ ಕಂದಡ್ಕ, ಜಿನ್ನಪ್ಪ ಪೂಜಾರಿ, ಸುನಿಲ್ ಕೇರ್ಪಳ, ಸಂತೋಷ್ ಕುತ್ತಮೊಟ್ಟೆ, ಹರೀಶ್ ಬೂಡುಪನ್ನೆ, ಚನಿಯ ಕಲ್ತಡ್ಕ,
ಸಹಕಾರ ಭಾರತಿ ಅಭ್ಯರ್ಥಿಗಳಾದ
ಎನ್.ಎ.ರಾಮಚಂದ್ರ, ಬಾಲಗೋಪಾಲ ಸೇರ್ಕಜೆ,
ಹೇಮಂತ ಕಂದಡ್ಕ, ವೆಂಕಟ್ರಮಣ ಮುಳ್ಯ, ಚಂದ್ರಶೇಖರ ನಡುಮನೆ, ಶಿವರಾಮ ಕೇರ್ಪಳ, ಕೇಶವ ಸಿ.ಎ ಹೊಸಗದ್ದೆ, ಪ್ರಬೋದ್ ಶೆಟ್ಟಿ ಮೇನಾಲ, ವಿಕ್ರಮ್ ಅಡ್ಪಂಗಾಯ, ನವ್ಯಾ ಚಂದ್ರಶೇಖರ ಅಡ್ಪಂಗಾಯ ಉಪಸ್ಥಿತರಿದ್ದರು












