ಸುಳ್ಯ: ಸಿಎ ಬ್ಯಾಂಕ್ ಆಡಳಿತ ಮಂಡಳಿಗೆ ಡಿ.31ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು ದಾಖಲಿಸಿದೆ. 13 ಸ್ಥಾನಗಳಲ್ಲಿಯೂ ಗೆಲುವು ದಾಖಲಿಸಿ ಸಹಕಾರ ಭಾರತಿ ಕ್ಲೀನ್ ಸ್ವೀಪ್ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಸಹಕಾರ ಭಾರತಿಯ ಅಭ್ಯರ್ಥಿಗಳಾಗಿ ಸ್ಪರ್ಧೆ ನಡೆಸಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ
ಎನ್.ಎ.ರಾಮಚಂದ್ರ, ಪ್ರಬೋದ್ ಶಟ್ಟಿ ಎಂ, ವಾಸುದೇವ ನಾಯಕ್ ಪಿ, ವಿಕ್ರಂ.ಎ.ವಿ ಅಡ್ಪಂಗಾಯ ವೆಂಕಟ್ರಮಣ ಮುಳ್ಯ, ಶಿವರಾಮ ಕೇರ್ಪಳ .
ಸಾಲಗಾರ ಕ್ಷೇತ್ರ ಮಹಿಳಾ ಮೀಸಲು ಕ್ಷೇತ್ರದಿಂದ ನವ್ಯ ಎ.ಸಿ.ಹಾಗೂ ಹರಿಣಾಕ್ಷಿ ಬಿ.
ಸಾಲಗಾರ ಕ್ಷೇತ್ರದ ಹಿಂದುಳಿದ ವರ್ಗ ಎ 1 ಸ್ಥಾನದಿಂದ ಸಹಕಾರ ಭಾರತಿಯ ಹೇಮಂತ ಕೆ.ಆರ್.ಕಂದಡ್ಕ
ಸಾಲಗಾರ ಕ್ಷೇತ್ರದ ಹಿಂದುಳಿದ ವರ್ಗ ಬಿ ಸ್ಥಾನದಲ್ಲಿ ಸಹಕಾರ ಭಾರತಿಯ ಬಾಲಗೋಪಾಲ ಎಂ.ಸಾಲಗಾರ ಕ್ಷೇತ್ರದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸಹಕಾರ ಭಾರತಿಯ ಕೇಶವ ಸಿ.ಎ.
ಸಾಲಗಾರ ಕ್ಷೇತ್ರದ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ಚಂದ್ರಶೇಖರ ಡಿ.ಕೆ
ಸಾಲಗಾರರಲ್ಲದ ಕ್ಷೇತ್ರದಿಂದ ಸಹಕಾರ ಭಾರತಿಯ ಚಂದ್ರಶೇಖರ ನಡುಮನೆ
ಆಯ್ಕೆಯಾದರು.









