ಸುಳ್ಯ:ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ವಿಕ್ರಮ್ ಅಡ್ಪಂಗಾಯ, ಉಪಾಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ ನಡುಮನೆ ಹಾಗೂ ಎಲ್ಲ ನಿರ್ದೇಶಕರನ್ನು ಶಾಸಕಿ ಭಾಗೀರಥಿ ಮುರುಳ್ಯ ಗೌರವಿಸಿದರು. ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ ಶುಭ ಹಾರೈಸಿದರು.ಸಿ.ಎ.ಬ್ಯಾಂಕ್
Llನೂತನ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ ಮಾತನಾಡಿದರು. ಉಪಾಧ್ಯಕ್ಷ ಚಂದ್ರಶೇಖರ ನಡುಮನೆ, ನಿರ್ದೇಶಕರಾದ ಬಾಲಗೋಪಾಲ ಸೇರ್ಕಜೆ, ಶೀನಪ್ಪ ಬಯಂಬು, ವೆಂಕಟ್ರಮಣ ಮುಳ್ಯ ವೇದಿಕೆಯಲ್ಲಿ ಇದ್ದರು.ವಿನಯ ಕುಮಾರ್ ಕಂದಡ್ಕ ಸ್ವಾಗತಿಸಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಕಾರ್ಯಕ್ರಮ ನಿರೂಪಿಸಿದರು.









