ಸುಳ್ಯ: ಸಿಎ ಬ್ಯಾಂಕ್ ಆಡಳಿತ ಮಂಡಳಿಗೆ ಡಿ.31ರಂದು ನಡೆಯುವ ಚುನಾವಣೆಗೆ 13 ಸ್ಥಾನಗಳಿಗೆ ಒಟ್ಟು 26 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 32 ನಾಮಪತ್ರ ಸಲ್ಲಿಕೆಯಾಗಿತ್ತು. ಡಿ.25 ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯಗೊಂಡಾಗ ಕಣದಲ್ಲಿರುವವರ ಚಿತ್ರಣ ಸ್ಪಷ್ಟವಾಗಿದೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಮತ್ತು ಸಹಕಾರ ರಂಗದ ಅಭ್ಯರ್ಥಿಗಳ ಮಧ್ಯೆ ನೇರ
ಸ್ಪರ್ಧೆ ನಡೆಯಲಿದೆ. ಸಹಕಾರ ಭಾರತಿ ಹಾಗೂ ಸಹಕಕಾರ ರಂಗ ಎಲ್ಲಾ 13 ಸ್ಥಾನಗಳಿಗೆ ಅಭ್ಯರ್ಥಿ ಕಣಕ್ಕಿಳಿಸಿದೆ.
ಸಾಲಗಾರರ ಸಾಮಾನ್ಯ ಕ್ಷೇತ್ರದ 6 ಸ್ಥಾನಗಳಿಗೆ 12 ಮಂದಿ ಕಣದಲ್ಲಿದ್ದಾರೆ.
ಸಹಕಾರ ಭಾರತಿಯ ಅಭ್ಯರ್ಥಿಗಳಾಗಿ ಎನ್.ಎ.ರಾಮಚಂದ್ರ, ಪ್ರಬೋದ್ ಶಟ್ಟಿ ಎಂ, ವಾಸುದೇವ ನಾಯಕ್ ಪಿ, ವಿಕ್ರಂ.ಎ.ವಿ ಅಡ್ಪಂಗಾಯ ವೆಂಕಟ್ರಮಣ ಮುಳ್ಯ, ಶಿವರಾಮ ಕೇರ್ಪಳ ಕಣದಲ್ಲಿದ್ದಾರೆ. ಸಹಕಾರ ರಂಗದ ಅಭ್ಯರ್ಥಿಗಳಾಗಿ ಕರುಣಾಕರ ಎ.ಎಸ್. ಅಡ್ಪಂಗಾಯ, ರವೀಶ ಎಂ, ರಾಮಚಂದ್ರ ಪೆಲ್ತಡ್ಕ, ರಾಹುಲ್ ಎ.ಕೆ.ಅಡ್ಪಂಗಾಯ, ವಿಶ್ವನಾಥ ಪಿ.ಎಸ್.ಮುಳ್ಯ, ಶಶಿಧರ ಎ.ಆರ್ ಶಿರಾಜೆ ಕಣದಲ್ಲಿದ್ದಾರೆ.
ಸಾಲಗಾರ ಕ್ಷೇತ್ರ ಮಹಿಳಾ ಮೀಸಲು ಸ್ಥಾನಗಳಿಗೆ 4 ಮಂದಿ ಕಣದಲ್ಲಿದ್ದಾರೆ. ಸಹಕಾರ ಭಾರತಿ ಅಭ್ಯರ್ಥಿಗಳಾಗಿ ನವ್ಯ ಎ.ಸಿ., ಹಾಗೂ ಹರಿಣಾಕ್ಷಿ ಬಿ. ಕಣದಲ್ಲಿದ್ದಾರೆ. ಸಹಕಾರ ರಂಗದ ಅಭ್ಯರ್ಥಿಗಳಾಗಿ ಜಯಂತಿ ಕೆ.ಜಿ ಹಾಗೂ ಲೀಲಾ ಮನಮೋಹನ ಕಣದಲ್ಲಿದ್ದಾರೆ.
ಸಾಲಗಾರ ಕ್ಷೇತ್ರದ ಹಿಂದುಳಿದ ವರ್ಗ ಎ 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಹಕಾರ ಭಾರತಿಯ ಹೇಮಂತ ಕೆ.ಆರ್.ಕಂದಡ್ಕ ಹಾಗೂ ಸಹಕಾರ ರಂಗದ ರಾಮಣ್ಣ ಪೂಜಾರಿ ಪಿ.ಕೆ ಅಭ್ಯರ್ಥಿಗಳಾಗಿದ್ದಾರೆ.
ಸಾಲಗಾರ ಕ್ಷೇತ್ರದ ಹಿಂದುಳಿದ ವರ್ಗ ಬಿ 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಹಕಾರ ಭಾರತಿಯ ಬಾಲಗೋಪಾಲ ಎಂ. ಹಾಗೂ ಸಹಕಾರ ರಂಗದ ವಿಜಯಕುಮಾರ್ ಪಡ್ಪು ಅಭ್ಯರ್ಥಿಗಳಾಗಿದ್ದಾರೆ.
ಸಾಲಗಾರ ಕ್ಷೇತ್ರದ ಪರಿಶಿಷ್ಟ ಜಾತಿ ಮೀಸಲು 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಹಕಾರ ಭಾರತಿಯ ಕೇಶವ ಸಿ.ಎ. ಹಾಗೂ ಸಹಕಾರ ರಂಗದ ಬಾಬು ಮುಗೇರ ಪಿ. ಅಭ್ಯರ್ಥಿಗಳಾಗಿದ್ದಾರೆ.
ಸಾಲಗಾರ ಕ್ಷೇತ್ರದ ಪರಿಶಿಷ್ಟ ಪಂಗಡ ಮೀಸಲು 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಹಕಾರ ಭಾರತಿಯ ಚಂದ್ರಶೇಖರ ಡಿ.ಕೆ ಹಾಗೂ ಸಹಕಾರ ರಂಗದ ವಿಶ್ವನಾಥ ನೆಲ್ಲಿಬಂಗಾರಡ್ಕ ಅಭ್ಯರ್ಥಿಗಳಾಗಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದ 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಹಕಾರ ಭಾರತಿಯ ಚಂದ್ರಶೇಖರ ನಡುಮನೆ ಹಾಗೂ ಸಹಕಾರಿ ರಂಗದ ಲತೀಶ್ ಕುಮಾರ್ ರಾವ್ ಕೆ.ಪಿ ಅಭ್ಯರ್ಥಿಗಳಾಗಿದ್ದಾರೆ.
ನಾಮಪತ್ರ ವಾಪಾಸ್ಸು ಪಡೆದವರು:
ಸಾಲಗಾರ ಸಾಮಾನ್ಯ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಎ.ಎಸ್.ಮನ್ಮಥ, ಮೋಹನ ಎಂ, ಶಿವಪ್ರಕಾಶ್ ಎ.ಪಿ, ಬಾಲರಾಜ್ ಡಿ.ಜಿ, ಬಾಲಕೃಷ್ಣ ಎನ್.ಆರ್, ಜ್ಞಾನಾನಂದ ಎಚ್ ನಾಮಪತ್ರ ಹಿಂಪಡೆದಿದ್ದಾರೆ.
ಡಿ.31ರಂದು ಪೂ.9ರಿಂದ ಸಂಜೆ 4 ಗಂಟೆಯ ತನಕ ರಥಬೀದಿಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಬಳಿಕ ಅದೇ ದಿನ ಮತ ಎಣಿಕೆ ನಟೆದು ಫಲಿತಾಂಶ ಘೋಷಣೆ ಮಾಡಲಾಗುವುದು.












