ಸುಳ್ಯ: ಸಿಎ ಬ್ಯಾಂಕ್ ಆಡಳಿತ ಮಂಡಳಿಗೆ ಡಿ.31ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು ದಾಖಲಿಸಿದೆ. 13 ಸ್ಥಾನಗಳಲ್ಲಿಯೂ ಗೆಲುವು ದಾಖಲಿಸಿ ಸಹಕಾರ ಭಾರತಿ ಕ್ಲೀನ್ ಸ್ವೀಪ್ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಸಹಕಾರ ಭಾರತಿಯ ಅಭ್ಯರ್ಥಿಗಳಾದ
ಎನ್.ಎ.ರಾಮಚಂದ್ರ, ಪ್ರಬೋದ್ ಶಟ್ಟಿ ಎಂ, ವಾಸುದೇವ ನಾಯಕ್ ಪಿ, ವಿಕ್ರಂ.ಎ.ವಿ ಅಡ್ಪಂಗಾಯ ವೆಂಕಟ್ರಮಣ ಮುಳ್ಯ, ಶಿವರಾಮ ಕೇರ್ಪಳ,
ನವ್ಯ ಎ.ಸಿ ಅಡ್ಪಂಗಾಯ, ಹರಿಣಾಕ್ಷಿ ಬಿ, ಹೇಮಂತ ಕೆ.ಆರ್.ಕಂದಡ್ಕ,
ಬಾಲಗೋಪಾಲ ಎಂ, ಕೇಶವ ಸಿ.ಎ., ಚಂದ್ರಶೇಖರ ಡಿ.ಕೆ
ಚಂದ್ರಶೇಖರ ನಡುಮನೆ ನಿರ್ದೇಶಕರಾಗಿ
ಆಯ್ಕೆಯಾದರು.

ಅಭ್ಯರ್ಥಿಗಳು ಪಡೆದ ಮತಗಳು:
ಸಾಲಗಾರರ ಸಾಮಾನ್ಯ ಕ್ಷೇತ್ರದ 6 ಸ್ಥಾನಗಳಿಗೆ 12 ಮಂದಿ ಕಣದಲ್ಲಿದ್ದರು.
ಸಹಕಾರ ಭಾರತಿಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ ಎನ್.ಎ.ರಾಮಚಂದ್ರ 455, ಪ್ರಬೋದ್ ಶಟ್ಟಿ ಎಂ 432, ವಾಸುದೇವ ನಾಯಕ್ ಪಿ 410, ವಿಕ್ರಂ.ಎ.ವಿ ಅಡ್ಪಂಗಾಯ 445, ವೆಂಕಟ್ರಮಣ ಮುಳ್ಯ 429, ಶಿವರಾಮ ಕೇರ್ಪಳ 428 ಮತಗಳನ್ನು ಪಡೆದರು.
ಸಹಕಾರಿ ರಂಗದ ಅಭ್ಯರ್ಥಿಗಳಾದ ಕರುಣಾಕರ ಎ.ಎಸ್. ಅಡ್ಪಂಗಾಯ 204,ರವೀಶ ಎಂ 122, ರಾಮಚಂದ್ರ ಪೆಲ್ತಡ್ಕ 161, ರಾಹುಲ್ ಎ.ಕೆ.ಅಡ್ಪಂಗಾಯ 185, ವಿಶ್ವನಾಥ ಪಿ.ಎಸ್.ಮುಳ್ಯ 131, ಶಶಿಧರ ಎ.ಆರ್ ಶಿರಾಜೆ 172 ಮತ ಪಡೆದರು.
ಸಾಲಗಾರ ಕ್ಷೇತ್ರ ಮಹಿಳಾ ಮೀಸಲು 2 ಸ್ಥಾನಗಳಿಗೆ 4 ಮಂದಿ ಕಣದಲ್ಲಿದ್ದರು. ಸಹಕಾರ ಭಾರತಿ ಅಭ್ಯರ್ಥಿಗಳಾದ ನವ್ಯ ಎ.ಸಿ. 497, ಹರಿಣಾಕ್ಷಿ ಬಿ.451 ಸಹಕಾರಿ ರಂಗದ ಅಭ್ಯರ್ಥಿಗಳಾದ ಜಯಂತಿ ಕೆ.ಜಿ 158 ಹಾಗೂ ಲೀಲಾ ಮನಮೋಹನ 151 ಮತ ಗಳಿಸಿದರು.
ಸಾಲಗಾರ ಕ್ಷೇತ್ರದ ಹಿಂದುಳಿದ ವರ್ಗ ಎ 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು. ಸಹಕಾರ ಭಾರತಿಯ ಹೇಮಂತ ಕೆ.ಆರ್.ಕಂದಡ್ಕ 411 ಹಾಗೂ ಸಹಕಾರಿ ರಂಗದ ರಾಮಣ್ಣ ಪೂಜಾರಿ ಪಿ.ಕೆ 213 ಮತ ಪಡೆದರು.
ಸಾಲಗಾರ ಕ್ಷೇತ್ರದ ಹಿಂದುಳಿದ ವರ್ಗ ಬಿ 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು. ಸಹಕಾರ ಭಾರತಿಯ ಬಾಲಗೋಪಾಲ ಎಂ. 505 ಹಾಗೂ ಸಹಕಾರಿ ರಂಗದ ವಿಜಯಕುಮಾರ್ ಪಡ್ಪು 123 ಮತಗಳನ್ನು ಪಡೆದರು.
ಸಾಲಗಾರ ಕ್ಷೇತ್ರದ ಪರಿಶಿಷ್ಟ ಜಾತಿ ಮೀಸಲು 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು. ಸಹಕಾರ ಭಾರತಿಯ ಕೇಶವ ಸಿ.ಎ. 517 ಮತ ಹಾಗೂ ಸಹಕಾರಿ ರಂಗದ ಬಾಬು ಮುಗೇರ ಪಿ. 119 ಮತ ಪಡೆದರು.
ಸಾಲಗಾರ ಕ್ಷೇತ್ರದ ಪರಿಶಿಷ್ಟ ಪಂಗಡ ಮೀಸಲು 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು.ಸಹಕಾರ ಭಾರತಿಯ ಚಂದ್ರಶೇಖರ ಡಿ.ಕೆ 489 ಹಾಗೂ ಸಹಕಾರಿ ರಂಗದ ವಿಶ್ವನಾಥ ನೆಲ್ಲಿಬಂಗಾರಡ್ಕ 145 ಮತ ಪಡೆದರು.
ಸಾಲಗಾರರಲ್ಲದ ಕ್ಷೇತ್ರದ 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು. ಸಹಕಾರ ಭಾರತಿಯ ಚಂದ್ರಶೇಖರ ನಡುಮನೆ 189 ಹಾಗೂ ಸಹಕಾರಿ ರಂಗದ ಲತೀಶ್ ಕುಮಾರ್ ರಾವ್ ಕೆ.ಪಿ 30 ಮತಗಳು ಪಡೆದರು.
ಸಹಕಾರ ಇಲಾಖೆಯ ಶಿವಲಿಂಯ್ಯ ಚುನಾವಣಾಧಿಕಾರಿಯಾಗಿದ್ದರು. ಸಿಎ ಬ್ಯಾಂಕ್ನ ಕಾರ್ಯನಿರ್ವಹಣಾಧಿಕಾರಿ ಸುದರ್ಶನ, ಸಹಕಾರ ಇಲಾಖೆ ಹಾಗು ಸಿಎ ಬ್ಯಾಂಕ್ನ ಸಿಬ್ಬಂದಿಗಳು ಸಹಕರಿಸಿದರು.









