ಸುಳ್ಯ: ಸುಳ್ಯ ಸಿಎ ಬ್ಯಾಂಕ್ ಆಡಳಿತ ಮಂಡಳಿಗೆ ಡಿ.31ರಂದು ನಡೆಯಲಿರುವ ಚುನಾವಣೆಗೆ ಡಿ.21ರಂದು 21 ನಾಮಪತ್ರ ಸಲ್ಲಿಕೆಯಾಗಿದೆ. ಡಿ.23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 24 ರಂದು ಪರಿಶೀಲನೆ ನಡೆಯಲಿದೆ. 25 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿ.31ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ
ರಥಬೀದಿಯ ರೋಟರಿ ಶಾಲೆಯಲ್ಲಿ ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆ ಆಗಲಿದೆ.
ಎಂ ಚುನಾವಣಾ ಅಧಿಕಾರಿಯಾದ ಸಹಕಾರಿ ಇಲಾಖೆಯ ಅಧಿಕಾರಿ ಶಿವಲಿಂಗಯ್ಯ ನಾಮಪತ್ರ ಸ್ವೀಕರಿಸಿದರು. ಸಿಎ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್.ಪಿ. ಸಹಕರಿಸಿದರು.

ನಾಮಪತ್ರ ಸಲ್ಲಿಸಿದವರು:
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 12 ಮಂದಿ ಅಭ್ಯರ್ಥಿಗಳು, ನಾಮಪತ್ರ ಸಲ್ಲಿಸಿದ್ದಾರೆ.
ಬಾಲಗೋಪಾಲ ಎಂ.ಸೇರ್ಕಜೆ, ಎನ್.ಎ.ರಾಮಚಂದ್ರ, ಹೇಮಂತ ಕೆ.ಆರ್.ಕಂದಡ್ಕ
ಪ್ರಬೋದ್ ಶೆಟ್ಟಿ ಮೇನಾಲ, ಚಂದ್ರಶೇಖರ ಸೋಣಂಗೇರಿ, ಶಿವರಾಮ ಕೇರ್ಪಳ, ನವ್ಯ ಎ.ಸಿ.ಅಡ್ಪಂಗಾಯ, ವಿಕ್ರಂ.ವಿ.ಎ. ಅಡ್ಪಂಗಾಯ, ಕೇಶವ ಸಿ.ಎ. ಹೊಸಗದ್ದೆ, ವಾಸುದೇವ ನಾಯಕ್ ಪಿ, ಚಂದ್ರಶೇಖರ ಡಿ.ಕೆ.ದೊಡ್ಡೇರಿ, ಹರಿಣಿ ಬಿ ನಾಮಪತ್ರ ಸಲ್ಲಿಸಿದ್ದಾರೆ.

ಸಹಕಾರಿ ರಂಗದ 9 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಹಕಾರಿ ರಂಗದ ಅಭ್ಯರ್ಥಿಗಳಾಗಿ ಕರುಣಾಕರ ಅಡ್ಪಂಗಾಯ, ವಿಜಯಕುಮಾರ ಪಡ್ಪು, ಜಯಂತಿ ಕೊಯಿಕುಳಿ, ವಿಶ್ವನಾಥ ನೆಲ್ಲಿಬಂಗಾರಡ್ಕ ಕುರುಂಜಿಭಾಗ್, ರಾಮಪಚಂದ್ರ ಪೆಲ್ತಡ್ಕ ಜಟ್ಟಿಪಳ್ಳ,ಶಶಿಧರ ಶಿರಾಜೆ,ಲತೀಕುಮಾರ್ ರಾವ್ ಕೆ.ಪಿ, ರಾಮಣ್ಣಪೂಜಾರಿ ಪೊಡುಂಬ, ಬಾಬು ಮುಗೇತ ನಾಮಪತ್ರ ಸಲ್ಲಿಸಿದ್ದಾರೆ.












