ಸುಳ್ಯ: ಸಿಎ ಬ್ಯಾಂಕ್ ಆಡಳಿತ ಮಂಡಳಿಗೆ ಡಿ.31ರಂದು ನಡೆಯಲಿದೆ. ಚುನಾವಣೆಗೆ 13 ಸ್ಥಾನಗಳಿಗೆ ಒಟ್ಟು 26 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಮತ್ತು ಸಹಕಾರಿ ರಂಗದ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ.
ಕಳೆದ ಹಲವು ಅವಧಿಯಲ್ಲಿ ನಡೆಸಿದ ಆಡಳಿತ ಮತ್ತೆ ಪಡೆಯುವ ಹುಮ್ಮಸ್ಸಿನಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಕಣಕ್ಕಿಳಿದರೆ. ಈ ಬಾರಿ ಬದಲಾವಣೆಯ ನಿರೀಕ್ಷೆಯಲ್ಲಿ ಸಹಕಾರ ರಂಗದ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಸಹಕಾರ ರಂಗಕ್ಕೆ
ಕಾಂಗ್ರೆಸ್ ಬೆಂಬಲ ಘೋಸಿದೆ. ಸಿಎ ಬ್ಯಾಂಕ್ನ ಹಾಲಿ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ನೇತೃತ್ವದಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಸಿಎ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಕರುಣಾಕರ ಅಡ್ಪಂಗಾಯ, ಶಶಿಶಧರ ಶಿರಾಜೆ ನೇತೃತ್ವದಲ್ಲಿ ಸಹಕಾರ ರಂಗ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.
ಸಿಎ ಬ್ಯಾಂಕ್ ಚುನಾವಣೆಗೆ ಎಲ್ಲಾ ಸಿದ್ಧತೆಗಳು ನಡೆಸಲಾಗಿದೆ. ಡಿ.31ರಂದು ಪೂ.9ರಿಂದ ಸಂಜೆ 4 ಗಂಟೆಯ ತನಕ ರಥಬೀದಿಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಬಳಿಕ ಅದೇ ದಿನ ಮತ ಎಣಿಕೆ ನಟೆದು ಫಲಿತಾಂಶ ಘೋಷಣೆ ಮಾಡಲಾಗುವುದು.


ಕಣದಲ್ಲಿ ಇರುವ ಅಭ್ಯರ್ಥಿಗಳು:
ಸಾಲಗಾರರ ಸಾಮಾನ್ಯ ಕ್ಷೇತ್ರದ 6 ಸ್ಥಾನಗಳಿಗೆ 12 ಮಂದಿ ಕಣದಲ್ಲಿದ್ದಾರೆ.
ಸಹಕಾರ ಭಾರತಿಯ ಅಭ್ಯರ್ಥಿಗಳಾಗಿ ಎನ್.ಎ.ರಾಮಚಂದ್ರ, ಪ್ರಬೋದ್ ಶಟ್ಟಿ ಎಂ, ವಾಸುದೇವ ನಾಯಕ್ ಪಿ, ವಿಕ್ರಂ.ಎ.ವಿ ಅಡ್ಪಂಗಾಯ ವೆಂಕಟ್ರಮಣ ಮುಳ್ಯ, ಶಿವರಾಮ ಕೇರ್ಪಳ ಕಣದಲ್ಲಿದ್ದಾರೆ. ಸಹಕಾರಿ ರಂಗದ ಅಭ್ಯರ್ಥಿಗಳಾಗಿ ಕರುಣಾಕರ ಎ.ಎಸ್. ಅಡ್ಪಂಗಾಯ, ರವೀಶ ಎಂ, ರಾಮಚಂದ್ರ ಪೆಲ್ತಡ್ಕ, ರಾಹುಲ್ ಎ.ಕೆ.ಅಡ್ಪಂಗಾಯ, ವಿಶ್ವನಾಥ ಪಿ.ಎಸ್.ಮುಳ್ಯ, ಶಶಿಧರ ಎ.ಆರ್ ಶಿರಾಜೆ ಕಣದಲ್ಲಿದ್ದಾರೆ.
ಸಾಲಗಾರ ಕ್ಷೇತ್ರ ಮಹಿಳಾ ಮೀಸಲು 4 ಸ್ಥಾನಗಳಿಗೆ 8 ಮಂದಿ ಕಣದಲ್ಲಿದ್ದಾರೆ. ಸಹಕಾರ ಭಾರತಿ ಅಭ್ಯರ್ಥಿಗಳಾಗಿ ನವ್ಯ ಎ.ಸಿ., ಹಾಗೂ ಹರಿಣಾಕ್ಷಿ ಬಿ. ಕಣದಲ್ಲಿದ್ದಾರೆ. ಸಹಕಾರಿ ರಂಗದ ಅಭ್ಯರ್ಥಿಗಳಾಗಿ ಜಯಂತಿ ಕೆ.ಜಿ ಹಾಗೂ ಲೀಲಾ ಮನಮೋಹನ ಕಣದಲ್ಲಿದ್ದಾರೆ.

ಚುನಾವಣಾ ಸಿದ್ಧತೆ
ಸಾಲಗಾರ ಕ್ಷೇತ್ರದ ಹಿಂದುಳಿದ ವರ್ಗ ಎ 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಹಕಾರ ಭಾರತಿಯ ಹೇಮಂತ ಕೆ.ಆರ್.ಕಂದಡ್ಕ ಹಾಗೂ ಸಹಕಾರಿ ರಂಗದ ರಾಮಣ್ಣ ಪೂಜಾರಿ ಪಿ.ಕೆ ಅಭ್ಯರ್ಥಿಗಳಾಗಿದ್ದಾರೆ.
ಸಾಲಗಾರ ಕ್ಷೇತ್ರದ ಹಿಂದುಳಿದ ವರ್ಗ ಬಿ 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಹಕಾರ ಭಾರತಿಯ ಬಾಲಗೋಪಾಲ ಎಂ. ಹಾಗೂ ಸಹಕಾರಿ ರಂಗದ ವಿಜಯಕುಮಾರ್ ಪಡ್ಪು ಅಭ್ಯರ್ಥಿಗಳಾಗಿದ್ದಾರೆ.
ಸಾಲಗಾರ ಕ್ಷೇತ್ರದ ಪರಿಶಿಷ್ಟ ಜಾತಿ ಮೀಸಲು 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಹಕಾರ ಭಾರತಿಯ ಕೇಶವ ಸಿ.ಎ. ಹಾಗೂ ಸಹಕಾರಿ ರಂಗದ ಬಾಬು ಮುಗೇರ ಪಿ. ಅಭ್ಯರ್ಥಿಗಳಾಗಿದ್ದಾರೆ.
ಸಾಲಗಾರ ಕ್ಷೇತ್ರದ ಪರಿಶಿಷ್ಟ ಪಂಗಡ ಮೀಸಲು 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಹಕಾರ ಭಾರತಿಯ ಚಂದ್ರಶೇಖರ ಡಿ.ಕೆ ಹಾಗೂ ಸಹಕಾರಿ ರಂಗದ ವಿಶ್ವನಾಥ ನೆಲ್ಲಿಬಂಗಾರಡ್ಕ ಅಭ್ಯರ್ಥಿಗಳಾಗಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದ 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಹಕಾರ ಭಾರತಿಯ ಚಂದ್ರಶೇಖರ ನಡುಮನೆ ಹಾಗೂ ಸಹಕಾರಿ ರಂಗದ ಲತೀಶ್ ಕುಮಾರ್ ರಾವ್ ಕೆ.ಪಿ ಅಭ್ಯರ್ಥಿಗಳಾಗಿದ್ದಾರೆ.









