ಸುಳ್ಯ: ಸಿಎ ಬ್ಯಾಂಕ್ ಆಡಳಿತ ಮಂಡಳಿಗೆ ಡಿ.31ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿ ಡಿ.23ರಂದು ಪೂರ್ತಿಗೊಂಡಾಗ 13 ಸ್ಥಾನಗಳಿಗೆ ಒಟ್ಟು 32 ನಾಮಪತ್ರ ಸಲ್ಲಿಕೆಯಾಗಿದೆ. ಡಿ.25 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅಂದು ಕಣದಲ್ಲಿರುವವರ
ಚಿತ್ರಣ ಸ್ಪಷ್ಟವಾಗಲಿದೆ.
ನಾಮಪತ್ರ ಸಲ್ಲಿಸಿದವರು:
ಕರುಣಾಕರ ಎ.ಎಸ್ ಅಡ್ಪಂಗಾಯ, ರಾಮಣ್ಣ ಪೂಜಾರಿ ಪಿ.ಕೆ, ರಾಮಚಂದ್ರ ಪೆಲ್ತಡ್ಕ, ವಿಶ್ವನಾಥ ನೆಲ್ಲಿಬಂಗಾರಡ್ಕ, ವಿಜಯಕುಮಾರ್ ಪಡ್ಪು, ಜಯಂತಿ.ಕೆ.ಜಿ, ಶಶಿಧರ ಶಿರಾಜೆ, ಲತೀಶ್ ಕುಮಾರ್ ರಾವ್, ಪ್ರಬೋದ್ ಶೆಟ್ಟಿ ಮೇನಾಲ, ಚಂದ್ರಶೇಖರ ನಡುಮನೆ, ಶಿವರಾಮ ಕೇರ್ಪಳ, ನವ್ಯ ಚಂದ್ರಶೇಖರ ಅಡ್ಪಂಗಾಯ, ವಿಕ್ರಂ ಎ.ವಿ. ಅಡ್ಪಂಗಾಯ, ಕೇಶವ ಸಿ.ಎ, ವಾಸುದೇವ ನಾಯಕ್ ಪಿ, ಚಂದ್ರಶೇಖರ ಡಿ.ಕೆ, ರಾಮಚಂದ್ರ ಎನ್.ಎ, ಬಾಲಗೋಪಾಲ ಎಂ.ಸೇರ್ಕಜೆ, ಹರಿಣಾಕ್ಷಿ ಬಿ, ಹೇಮಂತ ಕೆ.ಆರ್.ಕಂದಡ್ಕ, ಬಾಬು ಮುಗೇರ ಪಿ, ಶಿವಪ್ರಕಾಶ್ ಎ.ಪಿ, ಮನ್ಮಥ. ಎ.ಎಸ್, ಬಾಲಕೃಷ್ಣ ಎನ್.ಆರ್, ಬಾಲರಾಜ್ ಡಿ.ಜಿ, ವೆಂಕಟ್ರಮಣ ಎಂ, ಲೀಲಾ ಮನಮೋಹನ, ರಾಹುಲ್ ಎ.ಕೆ ಮೋಹನ ಎಂ, ವಿಶ್ವನಾಥ.ಪಿ.ಎಸ್, ರವೀಶ ಎಂ, ಜ್ಞಾನಾನಂದ ಎಚ್. ನಾಮಪತ್ರ ಸಲ್ಲಿಸಿದ್ದಾರೆ.
ಸಹಕಾರ ಭಾರತಿ, ಸಹಕಾರಿ ರಂಗದ ಅಭ್ಯರ್ಥಿಗಳು ಹಾಗೂ ಇತರ ಅಭ್ಯರ್ಥಿಗಳು ಸೇರಿ ಒಟ್ಟು 32 ನಾಮಪತ್ರ ಸಲ್ಲಿಸಲಾಗಿದೆ.












