


ನವದೆಹಲಿ: ದೇಶದ ಆರು ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದಂತೆ ಟಿಆರ್‌ಎಸ್, ಆರ್‌ಜೆಡಿ ಮತ್ತು ಶಿವಸೇನಾ (ಉದ್ಧವ ಠಾಕ್ರೆ ಬಣ) ತಲಾ ಒಂದೊಂದು ಸ್ಥಾನದಲ್ಲಿ ಗೆದ್ದಿವೆ.
ಉತ್ತರ ಪ್ರದೇಶ ಗೋಲಾ ಗೋಕರ್ಣನಾಥ–
ಆಡಳಿತಾರೂಢ ಬಿಜೆಪಿಯ ಅಮನ್ ಗಿರಿ, ತೆಲಂಗಾಣ
ಮುನುಗೋಡು- ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಭ್ಯರ್ಥಿ ಕೂಸುಕುಂಟ್ಲ ಪ್ರಭಾಕರ ರೆಡ್ಡಿ, ಮಹಾರಾಷ್ಟ್ರ ಮುಂಬೈನ ಅಂಧೇರಿ ಪೂರ್ವ ವಿಧಾನಸಭೆ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಬಣದ ಶಿವಸೇನಾ ಆಭ್ಯರ್ಥಿ ರುತುಜಾ ರಮೇಶ್ ಲಟ್ಕೆ, ಹರಿಯಾಣ ಅದಮ್‌ಪುರ–ಬಿಜೆಪಿ
ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭವ್ಯ ಬಿಷ್ಣೋಯ್ ಬಿಹಾರ- ಗೋಪಾಲ್ ಗಂಜ್ – ಬಿಜೆಪಿಯ ಕುಸುಮ್ ದೇವಿ, ಮೊಕಾಮ-ಆರ್‌ಜೆಡಿಯ ನೀಲಂ ದೇವಿ,ಒಡಿಶಾ ಧಾಮ್‌ನಗರ್–ಬಿಜೆಪಿಯ ಸೂರ್ಯವಂಶಿ ಸೂರಜ್ ಗೆಲುವು ಸಾಧಿಸಿದ್ದಾರೆ.