ಪುತ್ತೂರು:ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ಸೇರಿ 10 ಮಂದಿ ಸಾಧಕರಿಗೆ ಬ್ಯಾರಿ ಸಾಹಿತ್ಯ ಅಕಾಡೆಮಿ ನೀಡುವ ಗೌರವ ಪ್ರಶಸ್ತಿ ಲಭಿಸಿದೆ. ಪುತ್ತೂರು ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾರಿ ಅಕಾಡೆಮಿಯ ಚಮ್ಮನ (ಗೌರವ ಪುರಸ್ಕಾರ ) ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮ್ಮರ್ ಯು.ಹೆಚ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾತ್ ಅಧ್ಯಕ್ಷರಾದ ಕೆ.ಪಿ ಮುಹಮ್ಮದ್ ಹಾಜಿ, ನ್ಯಾಯವಾದಿ ನೂರುದ್ದಿನ್ ಸಾಲ್ಮರ ಮತ್ತಿತರ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2022 ಮತ್ತು 2023ನೇ ಸಾಲಿನ ‘ಬ್ಯಾರಿ ಅಕಾಡೆಮಿ ಚಮ್ಮನʼ (ಗೌರವ ಪುರಸ್ಕಾರ) ಹತ್ತು ಮಂದಿ ಸಾಧಕರಿಗೆ ಪ್ರದಾನ ಮಾಡಿದೆ. ಅಬ್ದುಲ್ ಸಮದ್ ಬಾವಾ, ನಝ್ಮತ್ತುನ್ನೀಸಾ ಲೈಝ್, ಯಂ.ಪಿ ಬಶೀರ್ ಅಹ್ಮದ್ (ಬ್ಯಾರಿ ಸಾಹಿತ್ಯ), ಅನ್ಸಾರ್ ಇನೋಳಿ ಮತ್ತು ಸೈಫ್ ಕುತ್ತಾರ್ (ಬ್ಯಾರಿ ಭಾಷೆ), ರಶೀದ್ ನಂದಾವರ ಮತ್ತು ಮಹಮ್ಮದ್ ಅಲಿ ಬಡ್ಡೂರು, ಮಲ್ಲಿಕಾ ಶೆಟ್ಟಿ (ಬ್ಯಾರಿ ಸಂಸ್ಕೃತಿ, ಕಲೆ), ಟಿ.ಎಂ ಶಹೀದ್ (ಬ್ಯಾರಿ ಭಾಷೆ, ಸಂಘಟನೆ), ಯಾಸೀರ್ ಕಲ್ಲಡ್ಕ (ಬ್ಯಾರಿ ಸಂಸ್ಕೃತಿ) ಅವರು ‘ಬ್ಯಾರಿ ಅಕಾಡೆಮಿ ಚಮ್ಮನʼ ಕ್ಕೆ ಆಯ್ಕೆಯಾಗಿದ್ದಾರೆ.
ಈ ಪುರಸ್ಕಾರವು ತಲಾ ರೂ.10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.













