ಪತ್ತನಂತಿಟ್ಟ: ಶಬರಿಮಲೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸೊಂದು ಮಂಗಳವಾರ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಎಲವುಂಕಲ್ನಲ್ಲಿ
ಕಂದಕಕ್ಕೆ ಉರುಳಿ ಬಿದ್ದಿದ್ದು, ಬಸ್ನಲ್ಲಿದ್ದ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ .ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್
ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದು ತಮಿಳುನಾಡಿಗೆ ಹಿಂದಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಬಸ್ನಲ್ಲಿ ತಮಿಳುನಾಡಿನ ಮೈಲಾಡತುರೈ ಜಿಲ್ಲೆಯ ಒಂಬತ್ತು ಮಕ್ಕಳು ಸೇರಿದಂತೆ 64 ಯಾತ್ರಿಕರನ್ನು ಒಳಗೊಂಡಿದ್ದ ಬಸ್ ಮಧ್ಯಾಹ್ನದ ಬಳಿಕ ನಿಲಕಲ್ ಬಳಿಯ ಎಲವುಂಕಲ್ನಲ್ಲಿ ರಸ್ತೆಯಿಂದ ಕಂದಕಕ್ಕೆ ಉರುಳಿ ಬಿದ್ದು ಅಪಘಾತ ಸಂಘವಿಸಿದೆ. ಗಾಯಗೊಂಡವರನ್ನು ಪತ್ತನಂತಿಟ್ಟ ಮತ್ತು ಎರುಮೇಲಿಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಎಂದು ವರದಿಯಾಗಿದೆ. ಇಲವುಂಕಲ್-ಎರುಮೇಲಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.