ಸುಳ್ಯ: ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಸುಳ್ಯ ತಾಲೂಕಿನ ಗ್ರಾಮೀಣ ಭಾಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ವತಿಯಿಂದ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಸಲ್ಲಿಸಲಾಯಿತು.ಬಾಳುಗೋಡು ಭಾಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು.ಮರ್ಕಂಜ ಮಾರ್ಗದಲ್ಲಿ, ಪೇರಾಲು ಮಾರ್ಗದಲ್ಲಿ, ಉಬರಡ್ಕ – ಮಡಪಾಡಿ ಮಾರ್ಗದಲ್ಲಿ
ತುರ್ತು ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಯಿತು.
ಬಸ್ ಸಮಸ್ಯೆಯಿಂದ ಗ್ರಾಮೀಣ ನಾಗರಿಕರ ಹಾಗೂ ವಿದ್ಯಾರ್ಥಿಗಳ ದಿನನಿತ್ಯ ಪ್ರಯಾಣಕ್ಕೆ ಸಮಸ್ಯೆ ಉಂಟು ಮಾಡುತ್ತಿದೆ. ಆದ್ದರಿಂದ ಈ ಮಾರ್ಗಗಳ ಬಸ್ ಸೌಲಭ್ಯವನ್ನು ತಕ್ಷಣ ಪರಿಶೀಲಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ಪರಿಹಾರ ಒದಗಿಸುವಂತೆ ವಿನಂತಿಸಲಾಯಿತು.
ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಳಿಯ ಸಾತ್ವಿಕ್, ಎಬಿವಿಪಿ ನಗರ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪುನೀತ್, ಅಕ್ಷರ, ಕೀರ್ತನ್, ಶ್ರೀಶರಣ್, ಅಮಿತ್ ಅವರ ನಿಯೋಗ ಮನವಿ ಸಲ್ಲಿಸಿದರು.












