ಮಂಗಳೂರು: ಸುಳ್ಯದ ಗ್ರಾಮೀಣ ಭಾಗಗಳಲ್ಲಿ ಬಿ.ಎಸ್.ಎನ್.ಎಲ್ ಸಂಪರ್ಕದ ಉನ್ನತೀಕರಣ ಹಾಗೂ ನೆಟ್ವರ್ಕ್ ಸಮಸ್ಯೆ ಬಗ್ಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಸುಳ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖವಾಗಿ ಜನರು ಬಿ.ಎಸ್.ಎನ್.ಎಲ್ ನೆಟ್ ವರ್ಕ್ಗೆ
ಅವಲಂಬಿತವಾಗಿದ್ದಾರೆ ನೆಟ್ವರ್ಕ್ ಹಾಗೂ ಇಂಟರ್ನೆಟ್ ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಿದ್ದು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಬಿ.ಎಸ್.ಎನ್.ಎಲ್ ನ ಜಿ.ಎಮ್ ನವೀನ್ ಕುಮಾರ್ ಗುಪ್ತ ಮತ್ತು ಎ.ಜಿ.ಎಮ್ ಶಂಕರ್ ದೇವಾಡಿಗ ಅವರ ಜೊತೆ 4ಜಿ ಅಪ್ಗ್ರೇಡೇಶನ್ನ ಪ್ರಗತಿ ಹಾಗೂ ಗ್ರಾಮೀಣ ಭಾಗಗಳಲ್ಲಿರುವ ನೆಟ್ವರ್ಕ್ ಸಮಸ್ಯೆಯ ನಿವಾರಣೆಗೆ ಇರುವ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಬ್ರಿಜೇಶ್ ಚೌಟ ಚರ್ಚಿಸಿದರು.ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಉಪಸ್ಥಿತರಿದ್ದರು.