ಮಂಗಳೂರು: ಸುಳ್ಯ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಪರಿಹರಿಹರಿಸಲು ಆಗ್ರಹಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರು ನವದೆಹಲಿಯಲ್ಲಿ
ಬಿಎಸ್ಎನ್ಎಲ್ ಅಧ್ಯಕ್ಷ ಮತ್ತು ಎಂಡಿ ರಾಬರ್ಟ್ ಜೆ ರವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಚರ್ಚೆ ನಡೆಸಿದರು. ದ.ಕ.ಜಿಲ್ಲೆಯ ವಿಶೇಷವಾಗಿ ಸುಳ್ಯ ತಾಲೂಕಿನ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿರುವ ಬಿಎಸ್ ಎನ್ ಎಲ್ ಟವರಗಳ ನಿರ್ವಹಣೆ, ಬ್ಯಾಟರಿ ಮತ್ತು ಇತರ ಅವಶ್ಯಕತೆಗಳನ್ನು ಒದಗಿಸುವುದರ ಬಗ್ಗೆ ಚರ್ಚಿಸಿ, ಆ ಪ್ರದೇಶದಲ್ಲಿ ಹೆಚ್ಚುವರಿ ಟವರ್ ಅನ್ನು ಸ್ಥಾಪಿಸುವಂತೆ ಸಂಸದರು ಮನವಿ ಸಲ್ಲಿಸಿದರು.





