ಸುಳ್ಯ:ಭಾರತೀಯ ಗಡಿರಕ್ಷಣಾ ಪಡೆಗೆ ಆಯ್ಕೆಯಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರ್ಪಣೆಯ ಸುಶ್ಮಿತಾ ಎಂ. ಎ. ಇವರನ್ನು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಸುಳ್ಯದ ಸದರ್ನ್ ರೆಸಿಡೆನ್ಸಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಸಾಧಕಿಯನ್ನು ಸನ್ಮಾನಿಸಿ ಶುಭ ಹಾರೈಸಿದರು. ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಲತಾಪ್ರಸಾದ್ ಕುದ್ಪಾಜೆ, ಚಂದ್ರಶೇಖರ ಪೇರಾಲ್ ಶುಭ ಹಾರೈಸಿದರು.
ಬೆದ್ರ್ಪಣೆ ನಿವಾಸಿಯಾಗಿರುವ ಸುಶ್ಮಿತಾ ಮೇಲಡ್ತಲೆಯ ದಿವಂಗತ ನಾಗಪ್ಪ ಹಾಗೂ ಜಾನಕಿಯವರ ಪುತ್ರಿ. ಸ್ವಪ್ರಯತ್ನದಿಂದ ಗಡಿರಕ್ಷಣಾ ಪಡೆಗೆ ಆಯ್ಕೆಯಾಗಿದ್ದಾರೆ ಎಂದು ಪ್ರಮುಖರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸುಶ್ಮಿತಾರ ಸಹೋದರಿ ಹಾಗೂ ಸಂಬಂಧಿಗಳು ಹಾಗೂ ದೇವಿಪ್ರಸಾದ್ ಕುದ್ಪಾಜೆ ಉಪಸ್ಥಿತರಿದ್ದರು.












