ಅರಂತೋಡು: ಕೆಲವೇ ಗಂಟೆಗಳ ಅಂತರದಲ್ಲಿ ಸಹೋದರರಿಬ್ಬರು ನಿಧನರಾದ ಘಟನೆ ಅರಂತೋಡಿನಿಂದ ವರದಿಯಾಗಿದೆ. ಅರಂತೋಡು ಗ್ರಾಮದ ನಿವಾಸಿ ಅಬ್ದುಲ್ಲ ಅವರು (82) ಹಾಗೂ ಸಹೋದರ ಮಹಮ್ಮದ್ (76) ಇಂದು ಮುಂಜಾನೆ ನಿಧನರಾದರು. ಅಬ್ದುಲ್ಲ ಅವರು
ಅಬ್ದುಲ್ಲ
ಮಹಮ್ಮದ್
ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು. ಈ ವಿಷಯ ತಿಳಿಯುತಿದ್ದಂತೆ ಸಹೋದರ ಮಹಮ್ಮದ್ ಕೂಡ ಅಸ್ವಸ್ಥರಾಗಿ ಕುಸಿದುಬಿದ್ದರು.ಇವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ನಿಧನರಾದರು. ಕೆಲವೇ ಸಮಯದ ಅಂತರದಲ್ಲಿ ಸಹೋದರರಿಬ್ಬರು ನಿಧನರಾದುದು ಕುಟುಂಬ ವರ್ಗಕ್ಕೆ ಆಘಾತ ಉಂಟು ಮಾಡಿದೆ.