ಸುಳ್ಯ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಏ.28ರಂದು ಅರಂತೋಡಿಗೆ ಭೇಟಿ ನೀಡಿದರು. ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಮೈಸೂರಿನಿಂದ ಆಗಮಿಸುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೆ ಈಡಾಗಿ ಮೃತಪಟ್ಟಿದ್ದ ಅರಂತೋಡಿನ ದರ್ಶನ್ ಅವರ ಮನೆಗೆ
ಭೇಟಿ ನೀಡಿದರು. ಮೃತ ದರ್ಶನ್ ಅವರ ತಂದೆ ಗಂಗಾಧರ ಬನ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಶೇಷಪ್ಪ ಬನ ಅವರ ಮನೆಗೆ ಭೇಟಿ ನೀಡಿದರು. ಮತ ಚಲಾಯಿಸಲು ಬರುತ್ತಿದ್ದ ಸಂದರ್ಭದಲ್ಲಿ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಕಾರು ಮತ್ತು ಬೈಕ್ ಅಪಘಾತ ಸಂಭವಿಸಿ ಬೈಕ್ ಸವಾರರಾಗಿದ್ದ ದರ್ಶನ್ ಮೃತಪಟ್ಟು, ಶೇಷಪ್ಪ ಬನ ಅವರ ಪುತ್ರ ಅವಿನ್ ಗಾಯಗೊಂಡಿದ್ದರು. ಅವಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಳಿಕ ಬ್ರಿಜೇಶ್ ಚೌಟ ಅರಂತೋಡಿನ ಹಿರಿಯ ಬಿಜೆಪಿ ಕಾರ್ಯಕರ್ತರಾಗಿದ್ದ ಪುರುಷೋತ್ತಮ ಕುರುಂಜಿ ಅವರ ಮನೆಗೆ ಭೇಟಿ ನೀಡಿ ಅವರ ಪತ್ನಿ ವಾರಿಜಾ ಕುರುಂಜಿ ಅವರಲ್ಲಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ದಯಾನಂದ ಕುರುಂಜಿ, ಪ್ರಮುಖರಾದ ಶಿವಾನಂದ ಕುಕ್ಕುಂಬಳ, ಭಾರತೀ ಪುರುಷೋತ್ತಮ, ಕುಸುಮಾಧರ ಅಡ್ಕಬಳೆ, ತೀರ್ಥರಾಮ ಅಡ್ಕಬಳೆ, ಶಂಕರಲಿಂಗಂ ತೊಡಿಕಾನ, ಪ್ರದೀಪ್ ಗುಂಡ್ಲ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.