ಮಂಗಳೂರು: ಈ ಮಣ್ಣಿಗೆ, ದೈವ ದೇವರ ತುಳುನಾಡಿಗೆ ವಿಶೇಷ ಶಕ್ತಿಯಿದೆ. ದಕ್ಷಿಣ ಕನ್ನಡ ಎಂಬ ಅದ್ಭುತ ನೆಲದಲ್ಲಿ ಬಿಜೆಪಿ ಟಿಕೆಟ್ ಕೊಟ್ಟಿರುವುದಕ್ಕೆ ಋಣಿಯಾಗಿದ್ದೇನೆ. ಪಕ್ಷ ದೊಡ್ಡ ಜವಾಬ್ದಾರಿ ನೀಡಿದೆ ಎಂದು
ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು, ದೇಶದ, ರಾಜ್ಯದ, ಜಿಲ್ಲೆಯ ಎಲ್ಲಾ ನಾಯಕರಿಗೆ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ ಎಂದರು.ಸೈನಿಕನಾಗಿ ದೇಶ ಸೇವೆಗೈದು ದೇಶದ ಹಲವು ಕಡೆಗಳಲ್ಲಿ ಸಂಚರಿಸಿ ನೈಜ ಭಾರತವನ್ನು ಕಂಡಿದ್ದೇನೆ. ನಮ್ಮ ಮಣ್ಣಿನ ಮಕ್ಕಳ ಸಾಮರ್ಥ್ಯವನ್ನು ತಿಳಿದಿದ್ದೇನೆ. ಈ ದೇಶಕ್ಕಾಗಿ ಅಸಂಖ್ಯಾತ ಯೋಧರು ಬಲಿದಾನ ಮಾಡಿದ್ದಾರೆ. ಹಿಂದುತ್ವ ನನ್ನ ಬದ್ಧತೆ, ಅಭಿವೃದ್ಧಿಯೇ ಆದ್ಯತೆ ಎಂದು ಅವರು ಹೇಳಿದರು.









