ಸುಳ್ಯ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬುಧವಾರ ಬಿಜೆಪಿ ಯುವ ಮೋರ್ಚಾ ಮುಖಂಡರಾಗಿದ್ದ ದಿ. ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಭೇಟಿ ನೀಡಿದರು.ನೆಟ್ಟಾರು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಅವರ ಕುಟುಂಬದ ಜೊತೆ ಮಾತುಕತೆ ನಡೆಸಿಸರು.ಈ ಸಂದರ್ಭ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಪಕ್ಷದ ಮುಖಂಡರು ಹಾಗೂ
ಕಾರ್ಯಕರ್ತರು ಉಪಸ್ಥಿತರಿದ್ದರು.ಮಾಜಿ ಸಚಿವರಾದ ಎಸ್. ಅಂಗಾರ ಇವರ ಮನೆಗೆ ಭೇಟಿ ನೀಡಲಾಯಿತು. ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನಕ್ಕೆ ಹಿರಿಯರಾದ ಚಂದ್ರಶೇಖರ ತಳೂರು ಇವರ ಮನೆ ಭೇಟಿ ನೀಡಲಾಯಿತು. ನಂತರ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದುಕೊಂಡು, ಸಂಪುಟ ನರಸಿಂಹ ಮಠಾಧೀಶರ ಭೇಟಿ ಮಾಡಿ ಆಶೀರ್ವಾದ ಪಡೆದುಕೊಳ್ಳಲಾಯಿತು.

ಸುಬ್ರಹ್ಮಣ್ಯ, ಗುತ್ತಿಗಾರು ಮಹಾಶಕ್ತಿಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ಇವರ ಮನೆ, ಹಿರಿಯರಾದ ದಿವಾಕರ ರಾಮಕುಂಜ, ಅಣ್ಣಾ ವಿನಯಚಂದ್ರ ಇವರ ಮನೆ ಭೇಟಿ ನೀಡಲಾಯಿತು. ಕೊಯಿಲ, ನೆಲ್ಯಾಡಿ, ಕಡಬ, ಬೆಳಂದೂರು ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಭೆ,ಬೆಳ್ಳಾರೆ ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು. ಗೌರಿಪುರಂ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು. ಐವರ್ನಾಡು ದಿ. ಎನ್ ಎಂ ಬಾಲಕೃಷ್ಣ ಗೌಡ ಪುತ್ಥಳಿಗೆ ಮಾಲಾರ್ಪಣೆ ಗೈದರು ಹಿರಿಯರಾದ ಉಪೇಂದ್ರ ಕಾಮತ್ ವಿನೋಬನಗರ, ನ. ಸೀತಾರಾಮ ಇವರ ಮನೆ ಭೇಟಿ ನೀಡಿದರು.







