ಸುಳ್ಯ: ವಿದ್ಯುತ್ ಗುತ್ತಿಗೆದಾರರ ಸಂಘ ಸುಳ್ಯ.,ಪುತ್ತೂರು, ಬೆಳ್ತಂಗಡಿ ಹಾಗೂ ಕಡಬದ ಗುತ್ತಿಗೆದಾರ ಸದಸ್ಯರು ಜೊತೆಗೂಡಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಮೂಲಕ ಇಂಧನ ಸಚಿವ ಕೆ ಜೆ ಜಾರ್ಜ್ ಅವರಿಗೆ ಬ್ರೇಕ್ ಡೌನ್ ಕಾಮಗಾರಿಗಳ ಸಮಸ್ಯೆಗಳ ಕುರಿತು
ಮನವಿ ಸಲ್ಲಿಸಲಾಯಿತು. .ವಿದ್ಯುತ್ ಗುತ್ತಿಗೆದಾರರು ನಿರ್ವಹಿಸುವ
ತುರ್ತು ಸೇವೆಗಳಲ್ಲಿ ಒಂದಾದ ಬ್ರೇಕ್ ಡೌನ್ ಕಾಮಗಾರಿಗಳಿಗೆ ಈ ಹಿಂದೆ ನೀಡುತ್ತಿದ್ದ ರೀತಿಯಲ್ಲಿ ಭತ್ಯೆ ನೀಡುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸೋಮಶೇಖರ ಪೈಕ, ಜಿಲ್ಲಾ ಕಾರ್ಯಕಾರಿ ಸಮಿತಿಯ ಮಾಯಿಲಪ್ಪ ಸಂಕೇಶ, ತಾಲೂಕು ಕಾರ್ಯದರ್ಶಿ ಹರೀಶ್ಚಂದ್ರ ಕೇಪಳಕಜೆ, ಖಜಾಂಜಿ ಮಧುಕಿರಣ್ , ಸತ್ಯ ನಾರಾಯಣ, ಶ್ರೀಧರ ಕೆ.ಎಸ್ ಉಪಸ್ಥಿತರಿದ್ದರು.