ಸುಳ್ಯ:ಸುಳ್ಯ ಬ್ರಹ್ಮರಗಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 48 ನೇ ವರ್ಷದ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಮತ್ತು ರಂಗಪೂಜೆ ಮಹೋತ್ಸವ ಭಕ್ತಿ ಸಂಭ್ರಮದಿಂದ ಜರುಗಿತು. ಪೂರ್ವಾಹ್ನ 24 ತೆಂಗಿನಕಾಯಿಯ ಗಣಪತಿ ಹೋಮವಾಗಿ ಬಳಿಕ
ಕೊಪ್ಪರಿಗೆ ಮುಹೂರ್ತ ನೆರವೇರಿತು. ಸೀಯಾಳ ಅಭಿಷೇಕ, ನವಕ ಕಲಶಾಭಿಷೇಕವಾಗಿ
ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಸಂಜೆ ಹಳೆಗೇಟಿನ ಗಣಪತಿ ಕಟ್ಟೆಯ ಬಳಿಯಿಂದ ದೇವಸ್ಥಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ರಾತ್ರಿ ವಿಶೇಷವಾಗಿ ದೇವರಿಗೆ ದೀಪಾಲಂಕರದೊಂದಿಗೆ ರಂಗಪೂಜೆ ಮಹೋತ್ಸವ ಜರುಗಿತು. ಭಜನೆ, ಚೆಂಡೆವಾದನ ನಡೆದು
ಬಳಿಕ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಭಕ್ತಿ ಸಂಗೀತ ಗಾಯನ ನಡೆಯಿತು. ಭಕ್ತಾದಿಗಳಿಗೆ ರಾತ್ರಿ ಅನ್ನ ಪ್ರಸಾದ ವಿತರಣೆ ನಡೆಯಿತು.












