ಸುಳ್ಯ:ಯುವ ಕವಯತ್ರಿ ಪ್ರಿಯಾ ಸುಳ್ಯರ ಚೊಚ್ಚಲ ಕವನ ಸಂಕಲನ ‘ನಾನು, ನಾನು… ನಾವು’ ಪುನರೂರಿನ ಶ್ರೀ ವಿಶ್ವನಾಥ ದೇವಾಲಯದ ಸಭಾಂಗಣದಲ್ಲಿ ನಡೆದ 13 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಅವರು
ಬಿಡುಗಡೆ ಮಾಡಿದರು. ಚೆನ್ನುಡಿಗಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಮುನ್ನುಡಿ ಬರೆದ ಡಾ.ಶೇಖರ ಅಜೆಕಾರುಮತ್ತು ಬೆನ್ನುಡಿ ಬರೆದ ಡಾ.ಸುರೇಶ ನೆಗಳಗುಳಿ ಅವರನ್ನು ಕೃತಿಕಾರರಾದ ಪ್ರಿಯಾ ಸುಳ್ಯ ಸನ್ಮಾನಿಸಿದರು . ವೇದಿಕೆಯಲ್ಲಿ ಹರಿಕೃಷ್ಣ ಪುನರೂರು,ವಿಜಯ ಕುಮಾರ್ ಕೊಡಿಯಾಲ್ ಬೈಲ್,ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ,ಭುವನಭಿರಾಮ ಉಡುಪ ,ಅರುಷ್.ಎನ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸುನಿಧಿ ಅಜೆಕಾರು ಸ್ವಾಗತಿಸಿ, ಸುನಿಜ ಅಜೆಕಾರು ವಂದಿಸಿದರು.