ಸುಳ್ಯ:ದೇಶದಲ್ಲಿಯೇ ಅತ್ಯಂತ ವಿಶಿಷ್ಠ ಮತ್ತು ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆ ಹೊಂದಿರುವುದು ತುಳುನಾಡು. ಈ ತುಳುನಾಡಿನ ಮೂಲ ನಂಬಿಕೆಗಳು ದೈವಾರಾಧನೆ. ದೈವಾರಾಧನೆಯ ಕೇಂದ್ರಗಳಾಗಿರುವ ದೈವಸ್ಥಾನಗಳ ಜೀರ್ಣೋದ್ಧಾರವೆಂದರೆ ಅದು
ತುಳು ಸಂಸ್ಕೃತಿ, ಪರಂಪರೆಯ ಜೀರ್ಣೋದ್ಧಾರ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.ಸುಳ್ಯದ ಬೂಡು ಶ್ರೀ ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭವನ್ನು
ಉದ್ಘಾಟಿಸಿ ಅವರು ಮಾತನಾಡಿದರು.ದೇವಾರಾಧನೆ, ದೈವಾರಾಧನೆ ಮತ್ತು ನಾಗಾರಾಧನೆ ಇಲ್ಲಿನ ವಿಶೇಷತೆ. ದೇವರು ಅನುಗ್ರಹ ನೀಡಿದರೆ, ದೈವಗಳು ಜನರ ನಂಬಿಕೆಗಳಿಗೆ ಸಾಕ್ಷಾತ್ಕಾರ ಕೊಟ್ಟು ರಕ್ಷಣೆ ನೀಡಿದವು ಎಂಬುದು ಜನರ ನಂಬಿಕೆ. ಪ್ರದೇಶದಿಂದ ಪ್ರದೇಶಕ್ಕೆ ದೈವಗಳ ಆರಾಧನೆಯಲ್ಲಿ, ಸಂಪ್ರದಾಯದಲ್ಲಿ ವಿಭಿನ್ನತೆ ಮತ್ತು ವಿಶಿಷ್ಠತೆ ಇದೆ.ದೈವಗಳ ಆರಾಧನೆ ನಮ್ಮ ಮೂಲ ನಂಬಿಕೆಯ ಜೊತೆಗೆ ಇದು ನ್ಯಾಯ ಪರಂಪರೆಯ ಕೇಂದ್ರಗಳು ಮತ್ತು ದೈವಾರಾಧನೆಗಳು ಸಾಮರಷ್ಯದ ಸಂಕೇತ ಎಂದು ಅವರು ಬಣ್ಣಿಸಿದರು.ದೈವಾರಾಧನೆಯು ಶುದ್ಧ ತುಳು ಭಾಷೆ ಮತ್ತು ತುಳು ಸಂಸ್ಕೃತಿಯನ್ನು ಉಳಿಸಿದೆ.ಬೂಡುವಿನಲ್ಲಿ ಎಲ್ಲರೂ ಒಟ್ಟಾಗಿ ಜೀರ್ಣೋದ್ಧಾರ ಮತ್ತು ಬ್ರಹ್ಮ ಕಲಶೋತ್ಸವ ನಡೆಸಿ ಉತ್ತಮ ಸಂದೇಶ ನೀಡಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ ‘ ದೇವಸ್ಥಾನಗಳ, ದೈವಸ್ಥಾನಗಳ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ನಡೆಸುವ ಅದೇ ಶ್ರದ್ಧೆಯಿಂದ ನಿತ್ಯ ನೈಮಿತ್ಯ ಆಚರಣೆಗಳು ಕೈಗೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ‘ಕಮಿಟಿ ಬಿ’ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ ಮಾತನಾಡಿ ‘ದೇವರು ಮತ್ತು ಭಕ್ತರ ಸಂಬಂಧಗಳು ಗಟ್ಟಿಯಾಗಿದ್ದರೆ ಅಂತಹಾ ಕ್ಷೇತ್ರಗಳು ಶಕ್ತಿಯಾಗಿ ಬೆಳೆಯುತ್ತದೆ. ಎಲ್ಲರೂ ಶ್ರದ್ಧೆ, ಭಕ್ತಿಯಿಂದ ಪ್ರೇರಣಾ ಶಕ್ತಿಯಾಗಿ ಕೆಲಸ ಮಾಡುವ ಮೂಲಕ ದೈವಿಕ ಶಕ್ತಿ ಪ್ರಜ್ವಲಿಸುವಂತಾಗಬೇಕು ಎಂದು ಹೇಳಿದರು.

ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಅರಂತೋಡು-ತೊಡಿಕಾನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉದ್ಯಮಿ ಹೇಮಂತ್ ಕಾಮತ್, ಶಾರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲ್ದಾಸ್, ಅಧ್ಯಕ್ಷ ನಾರಾಯಣ ಕೇಕಡ್ಕ,ನ.ಪಂ. ಮಾಜಿ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಎನ್.ಎ.ರಾಮಚಂದ್ರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಹಾಗೂ ಭಗವತಿ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕೇರ್ಪಳ, ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯ ಲಿಂಗಪ್ಪ ಗೌಡ ಕೇರ್ಪಳ,ಉಳ್ಳಾಕುಲು ಹಾಗೂ ಮಿತ್ತೂರು ದೈವದ ಹಿರಿಯ ಪೂಜಾರಿ ಮಿತ್ತೂರು ರವಿರಾಮ ರೈ, ಕುಕ್ಕನ್ನೂರು ಕಿನ್ನಿಮಾಣಿ- ಪೂಮಾಣಿ ದೈವಸ್ಥಾನದ ಪ್ರಧಾನ ಅರ್ಚಕ ಸುಭಾಷ್ ರೈ,
ನಿವೃತ್ತ ಶಿಕ್ಷಕಿ ಮೀನಾಕ್ಷಿ ಆನಂದ ಗೌಡ, ಊರಿನ ಹಿರಿಯರಾದ

ಮಾಧವ ಬೂಡು, ಕುಂಞ ಮೇಸ್ತ್ರಿ, ಸಿಎ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶೀನಪ್ಪ ಬಯಂಬು, ಆದಿ ದ್ರಾವಿಡ ಯುವ ವೇದಿಕೆ ಅಧ್ಯಕ್ಷ ಮೋನಪ್ಪ ಮಡಿವಾಳಮೂಲೆ, ಅಂಗನವಾಡಿ ಕಾರ್ಯಕರ್ತೆ ಕವಿತಾ ಬೂಡು, ದೈವಸ್ಥಾನದ ಆಡಳಿತ ಮೊಕ್ತೇಸರ ಮಾಯಿಲ ಬೂಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೂಡು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬೂಡು ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವಕ್ಕೆ ನೇತೃತ್ವ ವಹಿಸಿದ ಎನ್.ಎ.ರಾಮಚಂದ್ರ, ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಮೀನಾಕ್ಷಿ ಆನಂದ ಗೌಡ, ನ.ಪಂ.ಸದಸ್ಯ ರಿಯಾಝ್ ಕಟ್ಟೆಕ್ಕಾರ್ಸ್ ಅವರನ್ನು ಸನ್ಮಾನಿಸಲಾಯಿತು. ಪ್ರಿಯಾಂಕ, ರೇಷ್ಮ, ದೀಕ್ಷಿತ್ ಪ್ರಾರ್ಥಿಸಿದರು. ಕವಿತಾ ಬೂಡು ಸ್ವಾಗತಿಸಿದರು. ವಾಸುದೇವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್ಯನ್ ಮ್ಯೂಸಿಕಲ್ಸ್ ಸುಳ್ಯ ಇವರಿಂದ ಸಂಗೀತ ರಸಮಂಜರಿ. ಬಳಿಕ ಎಕ್ಸ್ ಟೆಸಿ ಡ್ಯಾನ್ಸ್ ಕ್ರಿವ್ ಸುಳ್ಯ ಇವರಿಂದ ಡಾನ್ಸ್ ಧಮಾಕ ನಡೆಯಿತು.ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.