ಸುಳ್ಯ: ಸುಳ್ಯದಲ್ಲಿ ಕಾಂಗ್ರೆಸ್ಸನ್ನು ಬಲಿಷ್ಠವಾಗಿ ಕಟ್ಟುವ ಗುರಿಯೊಂದಿಗೆ ಮತ್ತೆ ಕಾಂಗ್ರೆಸ್ ಸೇರಿದ್ದೇನೆ ಎಂದು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ. ಮಂಗಳೂರಿನಲ್ಲಿ ಕಾಂಗ್ರೆಸ್ ಸೇರಿದ ಬಳಿಕ ಸುಳ್ಯ ಮಿರರ್ ಜೊತೆ ಮಾತನಾಡಿದ ಅವರು ಕೆಲವೇ ದಿನದಲ್ಲಿ ಸುಳ್ಯದಲ್ಲಿ
ಬೃಹತ್ ಸಮಾವೇಶವನ್ನು ನಡೆಸಲಾಗುವುದು. ಈ ಸಮಾವೇಶದಲ್ಲಿ ನೂರಾರು ಮಂದಿ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಇಂದು ತರಾತುರಿಯಲ್ಲಿ ಕಾಂಗ್ರೆಸ್ ಸೇರುವ ಅನಿವಾರ್ಯತೆ ಇತ್ತು. ಬಿಜೆಪಿಗೆ ರಾಜಿನಾಮೆ ನೀಡಿದ ಬಳಿಕ ಬೇರೆ ಬೇರೆ ಕಡೆಯಿಂದ ಒತ್ತಡಗಳು ಬರುವ ಸಂದರ್ಭ ಉಂಟಾಗಿತ್ತು. ಆದುದರಿಂದ ತರಾತುರಿಯಲ್ಲಿ ಸೇರ್ಪಡೆ ಆಗಿದ್ದೇನೆ. ಬಿಜೆಪಿಯಲ್ಲಿ ನೊಂದವರು ಸೇರ್ಪಡೆ ಮಾಡುವ ಕಾಂಗ್ರೆಸ್ನಿಂದ ಹೊರ ಹೋದವರನ್ನು ಮತ್ತೆ ಕಾಂಗ್ರೆಸ್ಗೆ ಕರೆ ತರುವ ಪ್ರಯತ್ನ ನಡೆಸುತ್ತೇವೆ. ಎಲ್ಲರೂ ಒಟ್ಟಾಗಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತೇವೆ ಎಂದು ಅವರು ಹೇಳಿದ್ದಾರೆ. ತವರು ಮನೆಗೆ ಮರಳಿದ ಭಾವನೆ ಉಂಟಾಗಿದೆ ಎಂದರು.












