ಸುಳ್ಯ: ಬಿಜೆಪಿ ರೈತಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಇಂದು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು. ಸಚಿವರು ಹಾರ ಹಾಕಿ, ಕಾಂಗ್ರೆಸ್ ಶಾಲು ತೊಡಿಸಿ ಬೊಳ್ಳೂರು ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಬಿ.ಜೆ.ಪಿ. ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು
ಜಿಲ್ಲಾ ಬಿ.ಜೆ.ಪಿ. ರೈತಮೋರ್ಚಾ ಅಧ್ಯಕ್ಷ ಸ್ಥಾನಕ್ಕೆರಾಜೀನಾಮೆ ನೀಡಿ ಇಂದು ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ಮಾಜಿ ಗ್ರಾಮ ಸಮಿತಿ ಅಧ್ಯಕ್ಷ ಸತ್ಯ ಪ್ರಸಾದ್ ಪುಳಿಮಾರಡ್ಕ, ಸಹಕಾರಿ ಸಂಘದ ಮಾಜಿ ನಿರ್ದೇಶಕ ಡಿ.ಕೆ.ಸುರೇಶ್ ಕಾಂಗ್ರೆಸ್ ಗೆ ಸೇರ್ಪಡೆಯಾದರು.

ಮಾಜಿ ಸಚಿವ ರಮಾನಾಥ ರೈ, ಸುಳ್ಯ ವಿಧಾನಸಭಾ ಕ್ಷೇತ್ರ ಉಸ್ತುವಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಪ್ರಮುಖರಾದ ಎಂ.ವೆಂಕಪ್ಪ ಗೌಡ, ಕೆ.ಎಂ.ಮುಸ್ತಫ,
ಶಾಹುಲ್ ಹಮೀದ್, ಪ್ರವೀಣ್ ಚಂದ್ರ ಆಳ್ವ, ಸುರೇಶ್ ಎಂ.ಎಚ್., ಶಶಿಧರ ಎನ್.ಜೆ, ಸತ್ಯಪ್ರಸಾದ್ ಆಡಿಂಜ, ಇಟ್ಟಿಗುಂಡಿ ವೆಂಕಟ್ರಮಣ, ಜಯಪ್ರಕಾಶ್ ನೆಕ್ರಪ್ಪಾಡಿ, ಸತ್ಯಕುಮಾರ್ ಅಡಿಂಜ, ಕೀರ್ತನ್ ಕೊಡಪಾಲ, ಜಯರಾಮ ಬೊಳ್ಳಾಜೆ, ಭವಾನಿ ಶಂಕರ್ ಕಲ್ಮಡ್ಕ, ರವಿ ಪೂಜಾರಿ, ಚೇತನ್ ಕಜೆಗದ್ದೆ, ಪವನ್ ಮುಂಡ್ರಾಜೆ ಮತ್ತಿತರರು ಉಪಸ್ಥಿತರಿದ್ದರು.












