ಸುಳ್ಯ:ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಆಯುರ್ವೇದ ಪದವಿ ವಿಭಾಗದ ಅಧ್ಯಯನ ಮಂಡಳಿಯ ನೂತನ ಚೇರ್ಮೆನ್ ಆಗಿ ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ. ನೇಮಕಗೊಂಡಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ
ಉಪಕುಲಪತಿಗಳಾದ ಡಾ. ಭಗವಾನ್ ಬಿ ಸಿ ಅವರ ಅನುಮೋದನೆಯ ಮೇರೆಗೆ ವಿಶ್ವವಿದ್ಯಾಲಯದ ಕುಲ ಸಚಿವರಾದ ಶಿವಪ್ರಸಾದ್ ಪಿ. ಆರ್. ಅವರು ನೇಮಕ ಮಾಡಿದ್ದಾರೆ. 14 ಜನ ಆಂತರಿಕ ಸದಸ್ಯರು ಹಾಗೂ ಎರಡು ಜನ ಬಾಹ್ಯ ಸದಸ್ಯರನ್ನೊಳಗೊಂಡ ಸಮಿತಿಯಾಗಿದ್ದು, ಡಾ. ಲೀಲಾಧರ ಡಿ. ವಿ., ಅವರು ಚೇರ್ಮೆನ್ ಆಗಿ ಕರ್ತವ್ಯ ನಿರ್ವಹಿಸಲ್ಲಿದ್ದಾರೆ.