ಸುಳ್ಯ:ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ ಬಿ ಎಂ ಎಸ್ ಸಂಯೋಜಿತ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಮಾಜಿ ಸೈನಿಕ ಚಾರ್ಲ್ಸ್ ಹೆರಾಲ್ಡ್ ಡಿ ಸೋಜಾ ಧ್ವಜಾರೋಹಣ ನೆರವೇರಿಸಿದರು. ಅಟೋ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಪ್ರಕಾಶ್ ಎಂ ಎಸ್, ಮಾಜಿ ಅಧ್ಯಕ್ಷ ಪಿ. ಗೋಪಾಲಕೃಷ್ಣ ಭಟ್ ಪೈಚಾರ್,ರಾಧಾಕೃಷ್ಣ ಬೈತಡ್ಕ ಮಾತಾಡಿದರು, ಸಿಂಧೂರ ವಿಜಯದ ನೆನಪಿಗೆ ಕಾರ್ಯಕ್ರಮಕ್ಕೆ
ಬಂದ ಅತಿಥಿಗಳಿಗೆ ಸಿಂಧೂರ ತಿಲಕ ಹಣೆಗೆ ಹಚ್ಚಿ ಸ್ವಾಗತಿಸಲಾಯಿತು. ಆಪರೇಷನ್ ಸಿಂಧೂರದ ಪರಾಕ್ರಮ ಮೆರೆದ ಬ್ರಹ್ಮೋಸ್ ಕ್ಷಿಪಣಿ ಹಾಗೂ ಎಸ್ 400 ರಾಡಾರ್ ಸುದರ್ಶನ ಚಕ್ರದ ಕಟೌಟ್ಗೆ ಮಾತೇಯರಿಂದ ಹರಸಿನ ಕುಂಕುಮ ಹಚ್ಚಿ ಪುಷ್ಪ ನಮನ ಸಲ್ಲಿಸಲಾಯಿತು.
ಯಶಸ್ವಿ ಪಿ ಭಟ್ ವಂದೇ ಮಾತರಂ ಹಾಡಿದರು, ಝಂಡಾ ಊಂಚ ನಾಗರಾಜ್ ಮುಳ್ಯ ಹಾಡಿದರು. ಬಳಿಕ ನಗರದಲ್ಲಿ ಮೆರವಣಿಗೆ ನಡೆಯಿತು. ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ. ಕೋಶಾಧಿಕಾರಿ ರವಿ ಎಸ್ ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ ಪ್ರಮುಖರಾದ ವಿಜಯ ಕುಮಾರ್ ಉಬರಡ್ಕ, ಚಂದ್ರ ಶೇಖರ ಮರ್ಕಂಜ ನಿರ್ದೇಶಕರಾದ ಧರಣೇಶ್, ಜಯರಾಮ, ಲೋಕೇಶ್, ಶಂಕರ, ಜನಾರ್ದನ ಕೆ, ಪುನೀತ ಪ್ರಕಾಶ್, ಹರಿನಾಕ್ಷಿ ನಾರಾಯಣ, ಅನುರಾಧ ರವಿ ಉಪಸ್ಥಿತರಿದ್ದರು. ಸುರೇಂದ್ರ ಕಾಮತ್ ಸ್ವಾಗತಿಸಿ, ಪ್ರಶಾಂತ್ ಭಟ್ ವಂದಿಸಿದರು.ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಕಾರ್ಯಕ್ರಮ ನಿರೂಪಿಸಿದರು. ಭಾನುಪ್ರಕಾಶ್ ಅತಿಥಿಗಳ ಪರಿಚಯ ಮಾಡಿದರು.





