ಸುಳ್ಯ:ಬಿಎಂಎಸ್ ಸಂಯೋಜಿತ ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘದ ವತಿಯಿಂದ ತಾಲೂಕಿನ ಬಿಎಂಎಸ್ ಆಟೋ ಚಾಲಕ ಸದಸ್ಯರಿಗೆ ಕ್ರಿಕೆಟ್ ಪಂದ್ಯಾಟ ಕೊಡಿಯಾಲಬೈಲ್ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕಿನ
ಸುಬ್ರಮಣ್ಯ, ಜಾಲ್ಸೂರು, ಪಂಜ ಎಡಮಂಗಲ, ಕಲ್ಲುಗುಂಡಿ, ಹರಿಹರ, ಪೈಚಾರ್ ನಿಲ್ದಾಣ, ಶ್ರೀ ರಾಮ್ ಪೇಟೆ, ಗೋಪಿಕಾ ನಿಲ್ದಾಣ, ಬಸ್ ನಿಲ್ದಾಣ, ರಥಬೀದಿ ನಿಲ್ದಾಣ, ಕೆವಿಜಿ ನಿಲ್ದಾಣ, ಗಾಂಧಿನಗರ ನಿಲ್ದಾಣದ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದರು. ಪಂದ್ಯಾಟವನ್ನು ಮಧುಸೂದನ್ ಕುಂಭಕ್ಕೋಡು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಪ್ರಕಾಶ್ ಎಂ ಎಸ್ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಕೋಶಾಧಿಕಾರಿ ರವಿ ಎಸ್, ಸಂಘಟನಾ

ಕಾರ್ಯದರ್ಶಿ ಸುಂದರ್ ಪೆರಾಜೆ, ಉಪಾಧ್ಯಕ್ಷರಾದ ಪ್ರಶಾಂತ್ ಭಟ್, ಹರಿಹರ ಘಟಕದ ಅಧ್ಯಕ್ಷ ಮಧು, ಕುಕ್ಕುಜಡ್ಕ ಘಟಕದ ಅಧ್ಯಕ್ಷರಾದ ಸತೀಶ್, ಜಾಲ್ಸೂರು ಘಟಕದ ಅಧ್ಯಕ್ಷರಾದ ಗೋಪಾಲ, ಕಾರ್ಯದರ್ಶಿ ದಿನೇಶ್, ಪಂಜ ಘಟಕದ ಕಾರ್ಯದರ್ಶಿ ಜೀನತ್ ಚಿಮುಳ್ಳು, ಕಲ್ಲುಗುಂಡಿ ಘಟಕದ ಕಾರ್ಯದರ್ಶಿ ವಿನೋದ್ ನಿರ್ದೆಶಕರಾದ ಜಗದೀಶ್ ಎನ್.ಆರ್, ಭಾಸ್ಕರ್, ಜನಾರ್ದನ, ಜಯರಾಮ ಕುಲಾಲ್, ಚಾಮಯ್ಯ, ಶಿವಪ್ರಸಾದ, ಮಹೇಶ್, ಬಾನು ಪ್ರಕಾಶ್, ಪ್ರಸನ್ನ, ಪ್ರದೀಪ ರೋಹಿತ್, ವೇಣುಗೋಪಾಲ ನಾಯರ್, ಶಂಕರ ಉಪಸ್ಥಿತರಿದ್ದರು. ವಿಜಯ ಕುಮಾರ್ ಉಬರಡ್ಕ, ವಿನೀತ್ ಕೊಲ್ಚಾರ್, ಧನು, ರಕ್ಷಿತ್ ಜಯನಗರ ವೀಕ್ಷಕ ವಿವರಣೆ ನೀಡಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್ ಎಂ, ಕ್ರೀಡಾ ಸಂಚಾಲಕರಾದ ಸುರೇಂದ್ರ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.
















