ಸುಳ್ಯ:ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಹಿನ್ನಲೆಯಲ್ಲಿ ಇದರ ವಿರುದ್ಧವಾಗಿ ಪ್ರತ್ಯೇಕ ಸಭೆ ಆಯೋಜಿಸುವುದು, ಅದರಲ್ಲಿ ಭಾಗವಹಿಸುವುದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಹೇಳಿದೆ. ಹೆಚ್.ಎಂ.ನಂದಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವ ಹಿನ್ನಲೆಯಲ್ಲಿ ನಂದಕುಮಾರ್ ಅಭಿಮಾನಿಗಳ ಬಳಗ ಮಾ.26ರಂದು ಸುಳ್ಯ ಹಾಗು ಕಡಬದಲ್ಲಿ ಪ್ರತ್ಯೇಕ ಸಭೆ ಕರೆದಿರುವ ಹಿನ್ನಲೆಯಲ್ಲಿ ಬ್ಲಾಕ್ ಕಾಂಗ್ರೆಸ್
ಈ ಹೇಳಿಕೆ ನೀಡಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕಣಕ್ಕೆ ಅಧಿಕೃತ ಅಭ್ಯರ್ಥಿಯನ್ನಾಗಿ ಜಿ.ಕೃಷ್ಣಪ್ಪ ಅವರನ್ನು ಕೆಪಿಸಿಸಿ ಯಿಂದ ಆಯ್ಕೆ ಮಾಡಲಾಗಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿಗಳಾಗಿ ಆರು ಜನ ಕೆಪಿಸಿಸಿ ಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಸುಳ್ಯ ಬ್ಲಾಕ್ ಉಸ್ತುವಾರಿ ಜಿ.ಕೃಷ್ಣಪ್ಪ ಮತ್ತು ಕಡಬ ಬ್ಲಾಕ್ ಉಸ್ತುವಾರಿ ನಂದಕುಮಾರ್ ಯಚ್.ಯಂ ರವರು ಪ್ರಬಲ ಆಕಾಂಕ್ಷಿಗಳಾಗಿದ್ದರು, ಪಕ್ಷದ ಹೈಕಮಾಂಡ್ ಜಿ.ಕೃಷ್ಣಪ್ಪರ ಹೆಸರನ್ನು ಆಯ್ಕೆ ಮಾಡಿದೆ.
ಕಾಂಗ್ರೆಸ್ ಪಕ್ಷ 130 ವರ್ಷ ಇತಿಹಾಸವುಳ್ಳ ಪಕ್ಷ. ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಕಟಿಬದ್ಧರಾಗಬೇಕಾಗಿದೆ, ಅಭ್ಯರ್ಥಿಗಳನ್ನು ಅಳೆದು,ತೂಗಿ ಆಯ್ಕೆ ಮಾಡುವ ಪರಮಾಧಿಕಾರ ಹೈಕಮಾಂಡ್ ಹೊಂದಿದೆ. ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಎಷ್ಟೇ ಆಕಾಂಕ್ಷಿಗಳದ್ದರೂ ಆಯ್ಕೆ ಯಾಗುವುದು ಒಬ್ಬ ಆಕಾಂಕ್ಷಿ ಮಾತ್ರ. ಜಿ.ಕೃಷ್ಣಪ್ಪರ ಆಯ್ಕೆ ನಡೆದಿದೆ. ಇದರ ವಿರುದ್ಧ ಯಾರೇ ಆದರೂ ಸಭೆಗಳನ್ನು ನಡೆಸುವುದು ಭಾಗವಹಿಸುವುದು ಪಕ್ಷದ ಶಿಸ್ತನ್ನು ಉಲ್ಲೆಂಘಿಸಿದತ್ತಾಗುತಾದೆ. ಆದುದರಿಂದ ಯಾರು ಇಂತಹ ಸಭೆಗಳನ್ನು ಅಯೋಜಿಸದೆ ಹಾಗೂ ಭಾಗವಹಿಸದೆ ಪಕ್ಷದ ಶಿಸ್ತನ್ನು ಪಾಲಿಸಬೇಕು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಪಿ.ಸಿ ಜಯರಾಮ ಹಾಗು ಪ್ರಧಾನ ಕಾರ್ಯದರ್ಶಿ
ಪಿ.ಯಸ್ ಗಂಗಾಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.