ಸುಳ್ಯ: ಮುಂದಿನ ಡಿಸೆಂಬರ್ ನಲ್ಲಿ ನಡೆಯುವ ಪಂಚ ರಾಜ್ಯಗಳ ಚುನಾವಣೆಯ ಪೂರ್ವಭಾವಿಯಾಗಿ ಬಿಜೆಪಿ ಕೇಂದ್ರದ ಯೋಜನೆಯಂತೆ ಚುನಾವಣಾ ಸಿದ್ಧತೆಗಾಗಿ ವಿಸ್ತಾರಕರನನ್ನು ನೇಮಕ ಮಾಡಲಾಗಿದೆ. ಇದರಂತೆ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತೆಲಂಗಾಣ ರಾಜ್ಯದಲ್ಲಿ ವಿಸ್ತಾರಕರಾಗಿ ತೆರಳಿದ್ದಾರೆ. ಭೋಪಾಲ್ನಲ್ಲಿ ಎರಡು ದಿನಗಳ ಕಾಲ ರಾಷ್ಟ್ರೀಯ
ಅಧ್ಯಕ್ಷ ಜೆಪಿ ನಡ್ದ ಮತ್ತು ನರೇಂದ್ರ ಮೋದಿ ಅವರ ಮಾರ್ಗದರ್ಶನವನ್ನು ಪಡೆದು ಬಳಿಕ ತೆಲಂಗಾಣದಲ್ಲಿ ಅಲ್ಪ ಕಾಲೀನ ವಿಸ್ತಾರಕರಾಗಿ ನಿಯೋಜನೆಗೊಂಡಿದ್ದಾರೆ. ಮಹಬುಬ್ ನಗರ ಜಿಲ್ಲೆ, ದೇವರ್ಕದ್ರ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಸಮಿತಿಗಳ ಸಭೆ, ಮನೆ ಮನೆ ಪ್ರಚಾರ ಹಾಗೂ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮ ಗಳನ್ನು ನಡೆಸಲಾಗುತ್ತಿದೆ. ದೇವರ್ಕದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭೂತ್ ಪುರ್ ಮುನ್ಸಿಪಾಲ್ಟಿ ಹಾಗೂ ಗ್ರಾಮೀಣ ಕ್ಷೇತ್ರಗಳಲ್ಲಿ ಪಾರ್ಟಿಯ ಪ್ರಚಾರ ಕಾರ್ಯವನ್ನು ನಡೆಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಐವರು ಸೇರಿದಂತೆ ಕರ್ನಾಟಕದ 130 ಜನರು ಈ ರೀತಿ ಅಲ್ಪ ಕಾಲಿನ ವಿಸ್ತಾರಕರಾಗಿ ಕೆಲಸ ಮಾಡುತ್ತಿದ್ದು ದೇಶದ 2400ಕ್ಕೂ ಹೆಚ್ಚು ಕಾರ್ಯಕರ್ತರು ಐದು ರಾಜ್ಯಗಳಲ್ಲಿ ಎಂಟು ದಿನಗಳ ಕಾಲ ಪಕ್ಷದ ಕಾರ್ಯ ನಡೆಸಲು ನೇಮಕಗೊಂಡಿದ್ದಾರೆ ಎಂದು ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ.