ತಿರುವನಂತಪುರಂ:ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ 39 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.ಎರಡನೇ ಪಟ್ಟಿಯಲ್ಲಿ ಬಿಜೆಪಿ ಒಟ್ಟು 13 ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನ ನೀಡಿದೆ. ಕಾಸರಗೋಡಿನಿಂದ ಎಮ್.ಎಲ್ ಅಶ್ವಿನಿ ಕಣಕ್ಕೆ ಇಳಿಯುತ್ತಿದ್ದರೆ, ಆರನ್ಮುಳ ಕ್ಷೇತ್ರದಿಂದ
ಹಿರಿಯ ಮುಖಂಡ ಕುಮ್ಮನಂ ರಾಜಶೇಖರನ್,
ಕುಂದರ ಕ್ಷೇತ್ರದಿಂದ ರಾಬಿನ್ ರಾಧಾಕೃಷ್ಣನ್ ಸ್ಪರ್ಧಿಸುತ್ತಿದ್ದಾರೆ. ಗುರುವಾಯೂರ್ ಕ್ಷೇತ್ರದಿಂದ ಬಿ. ಗೋಪಾಲಕೃಷ್ಣನ್ಗೆ ಟಿಕೆಟ್ ನೀಡಲಾಗಿದೆ.ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಧರ್ಮಡಂ ಕ್ಷೇತ್ರದಲ್ಲಿ ಕೆ. ರಂಜಿತ್ರನ್ನು ಕಣಕ್ಕಿಳಿಸಲಾಗಿದೆ. ಮೊದಲ ಹಂತದಲ್ಲಿ 47 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು.










