ಪಂಜ:ವಿಧಾನ ಪರಿಷತ್ ಚುನಾವಣಾ ಪ್ರಯುಕ್ತ ಸುಳ್ಯ ಮಂಡಲದ ಪ್ರಮುಖರ ಸಭೆ ಪಂಜ ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ,ವಿಧಾನ ಪರಿಷತ
ಸದಸ್ಯ ಪ್ರತಾಪ ಸಿಂಹ ನಾಯಕ್,ಜಿಲ್ಲಾ ಪ್ರಮುಖರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕಡೆಂಜಿ, ಕಾರ್ಯದರ್ಶಿ ವಿನಯ ಕುಮಾರಗ ಮುಳುಗಾಡು, ಪೂವಪ್ಪ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿನಯ್ ಕುಮಾರ್ ಕಂದಡ್ಕ,ಪ್ರದೀಪ್ ರೈ ಮನವಳಿಕೆ, ಪ್ರಮುಖರಾದ ಅಪ್ಪಯ್ಯ ಮಣಿಯಾಣಿ, ಎ.ವಿ.ತೀರ್ಥರಾಮ,ಹರೀಶ್ ಕಂಜಿಪಿಲಿ,ಕೃಷ್ಣ ಶೆಟ್ಟಿ ಕಡಬ, ಆಶಾ ತಿಮ್ಮಪ್ಪ ಮತ್ತು ಪಂಚಾಯತ್ ಚುನಾವಣಾ ಪ್ರಭಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.









