ಸುಳ್ಯ:ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ಅಧಿಕಾರ ಸ್ವೀಕರಿಸಿದರು. ಸುಳ್ಯ ಬಿಜೆಪಿ ಮಂಡಲ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ ಅಧ್ಯಕ್ಷ ಹರೀಶ್ ಕಂಜಿಪಿಲಿ ನೂತನ ಅಧ್ಯಕ್ಷ ವೆಂಕಟ್ ವಳಲಂಬೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಮಂಡಲ ಸಮಿತಿ ನೂತನ ಪದಾಧಿಕಾರಿಗಳನ್ನು
ಘೋಷಿಸಲಾಯಿತು.
ಉಪಾಧ್ಯಕ್ಷರಾಗಿ ಶ್ರೀನಾಥ್ ರೈ ಬಾಳಿಲ, ರಾಮಕೃಷ್ಣ ಭಟ್ ಕುರುಂಬಡೇಲು,ಶಿವಾನಂದ ಕುಕ್ಕುಂಬಳ, ಶುಭದ ಎಸ್ ರೈ, ರಮೇಶ್ ಕಲ್ಪುರೆ, ಭಾಸ್ಕರ ಗೌಡ ಇಚ್ಚಿಲಂಪಾಡಿ ನೇಮಕಗೊಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿಗಳಾಗಿ ಶಿವಪ್ರಸಾದ್ ನಡುತೋಟ, ಗಣೇಶ್ ಉದನಡ್ಕ, ಜಯರಾಜ್ ಕುಕ್ಕೆಟ್ಟಿ, ಶಂಕರಲಿಂಗಂ ತೊಡಿಕಾನ, ತೇಜಸ್ವಿನಿ ಕಟ್ಟಪುಣಿ, ಯಶೋಧಾ ಬಾಳೆಗುಡ್ಡೆ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಗಳು: ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ
ಕೋಶಾಧಿಕಾರಿಯಾಗಿ ಸುಬೋದ್ ಶೆಟ್ಟಿ ಮೇನಾಲ ನೇಮಕಗೊಂಡಿದ್ದಾರೆ ಎಂದು ಸಭೆಯಲ್ಲಿ ನೂತನ ಅಧ್ಯಕ್ಷ ವೆಂಕಟ್ ವಳಲಂಬೆ ಘೋಷಿಸಿದರು.
ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಮಂಡಲ ಸಮಿತಿ ಸದಸ್ಯರ ನೇಮಕ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ನೂತನ ಅಧ್ಯಕ್ಷರು ತಿಳಿಸಿದರು.
ಸುಬೋದ್ ಶೆಟ್ಟಿ ಮೇನಾಲ(ಕೋಶಾಧಿಕಾರಿ)
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎ.ವಿ.ತೀರ್ಥರಾಮ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಹುಳಿದೊಟ್ಟು, ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಕಾರ್ಯದರ್ಶಿ ವಿನಯ ಮುಳುಗಾಡು, ಜಿಲ್ಲಾ ಎಸ್.ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪೂವಪ್ಪ ನಾಯ್ಕ್ ವೇದಿಕೆಯಲ್ಲಿ ಇದ್ದರು.
ಸುಭೋದ್ ಶೆಟ್ಟಿ ಮೇನಾಲ ಸ್ವಾಗತಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.
ಮುಖಂಡರಾದ ಎಸ್.ಎನ್.ಮನ್ಮಥ, ವೆಂಕಟ್ ದಂಬೆಕೋಡಿ, ಆಶಾ ತಿಮ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು.