ಸುಳ್ಯ:ಭಾರತೀಯ ಜನತಾ ಪಾರ್ಟಿಯ ಸುಳ್ಯಮಂಡಲದ ನೂತನ ಕಾರ್ಯಾಲಯವು ಆಯುರ್ವೇದಿಕ್ ಕಾಲೇಜಿನ ಬಳಿಯ ನಿವೇಶನದಲ್ಲಿ ಜೂನ್ 24ರಂದು ಉದ್ಘಾಟನೆಗೊಳ್ಳಲಿದೆ. ಅ.2ಕ್ಕೆ ನಡೆಯುವ ಸಮಾರಂಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಬಿಜೆಪಿಯ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಬಿ ಎಸ್ ಯಡಿಯೂರಪ್ಪ ನೂತನ ಕಚೇರಿಯನ್ನು

ಉದ್ಘಾಟಿಸಲಿದ್ದಾರೆ.ಯಡಿಯೂರಪ್ಪನವರು ಜೂನ್ 23 ರಂದು ಸಂಜೆ ಧರ್ಮಸ್ಥಳಕ್ಕೆ ಆಗಮಿಸಿ ಜೂನ್ 24ರಂದು ಧರ್ಮಸ್ಥಳದ ಬೆಳಗಿನ ಪೂಜೆಯಲ್ಲಿ ಭಾಗವಹಿಸಿ ಆಬಳಿಕ ಸುಬ್ರಹ್ಮಣ್ಯಕ್ಕೆ ಆಗಮಿಸಿ ಪೂಜೆ ಹಾಗೂ ದರ್ಶನವನ್ನು ಪಡೆಯಲಿದ್ದಾರೆ. ಬಳಿಕ ಸುಳ್ಯಕ್ಕೆ ಆಗಮಿಸಿ, ಸುಳ್ಯದ ನೂತನ ಬಿಜೆಪಿ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಅವರ ಜೊತೆಗೆ ಬಿಜೆಪಿಯ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ, ಮಾಜಿ ಸಚಿವರಾದ ಎಸ್. ಅಂಗಾರ, ಹಾಗೂ ಜಿಲ್ಲೆಯ ಶಾಸಕರುಗಳು ಭಾಗವಹಿಸಲಿದ್ದಾರೆ ಎಂದು ಮಂಡಲ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ