ಸುಳ್ಯ:ಬಿಜೆಪಿ ಮಹಿಳಾ ಮೋರ್ಚಾ ಸುಳ್ಯ ಮಂಡಲ ಸಭೆ ನರೇಂದ್ರ ವಿಹಾರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆಯಲ್ಲಿ ಮಹಿಳಾ ಮೋರ್ಚಾದ 22 ಜನರ ಪೂರ್ಣ ಸಮಿತಿ ಘೋಷಣೆ ಮಾಡಿ ಶಾಲು ಹಾಕಿ ಗೌರವಿಸಲಾಯಿತು.ಈ ಸಂಧರ್ಭದಲ್ಲಿ ಮಾತನಾಡಿದ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರತಿ ಮುರುಳ್ಯ ಅವಕಾಶಗಳನ್ನು ಸಮರ್ಥವಾಗಿ
ಬಳಸಿಕೊಳ್ಳಿ ಎಂದು ಹೇಳಿದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.ಮಂಜುಳಾ ರಾವ್ ಮಾತನಾಡಿ ನೂತನ ಸದಸ್ಯರಿಗೆ ಶುಭ ಹಾರೈಸಿ ಸಕ್ರಿಯ ಸದಸ್ಯತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಕುರಿತು ಮಾಹಿತಿ ನೀಡಿದರು.ಈ ಸಂಧರ್ಭ ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಿಕಲಾ ಸುಳ್ಯ ನಗರ ಪಂಚಾಯತ್ ಅಧ್ಯಕ್ಧೆಯಾದ ಹಿನ್ನಲೆಯಲ್ಲಿ ಗೌರವಿಸಲಾಯಿತು.
ವೇದಿಯಲ್ಲಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ. ಬಿ. ಕೆ., ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಕಿತ ಶೆಟ್ಟಿ, ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಬಬಿತ, ಜಿಲ್ಲಾ ಮಹಿಳಾ ಮೊರ್ಚಾ ಸುಳ್ಯ ಮಂಡಲ ಪ್ರಭಾರಿ ಯಶಸ್ವಿನಿ ಶಾಸ್ತ್ರಿ, ಜಿಲ್ಲಾ ಉಪಾಧ್ಯಕ್ಷೆ ಗುಣವತಿ ಕೊಲ್ಲಂತಡ್ಕ,ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಪುಷ್ಪ ಮೇದಪ್ಪ, ಹಿರಿಯ ಕಾರ್ಯಕರ್ತೆ ಆಶಾ ತಿಮ್ಮಪ್ಪ ಉಪಸ್ಥಿತರಿದ್ದರು.
ಸದಸ್ಯೆ ಹೇಮಾ ಮೋಹನ್ದಾಸ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಶಶಿಕಲಾ ನಿರಬಿದಿರೆ ಸ್ವಾಗತಿಸಿ ಧನ್ಯವಾದವಿತ್ತರು.