ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 47 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಬಿಜಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ನೇಮಂ ಕ್ಷೇತ್ರದಿಂದ ಸ್ಪರ್ಧಿಸುವರು.
ಮಾಜಿ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಈ ಬಾರಿ
ಮತ್ತೆ ಮಂಜೇಶ್ವರಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.ತ್ರಿಶೂರ್ನಲ್ಲಿ ಪದ್ಮಜಾ ವೇಣುಗೋಪಾಲ್, ಪಾಲಕ್ಕಾಡ್ನಲ್ಲಿ ಶೋಭಾ ಸುರೇಂದ್ರನ್, ವಟ್ಟಿಯೂರ್ಕಾವ್ನಲ್ಲಿ ಆರ್.ಶ್ರೀಲೇಖ, ಕೇಂದ್ರ ಸಚಿವ ಜಾರ್ಜ್ ಕಾಞಿರಪಳ್ಳಿಯಲ್ಲಿ, ವಿ.ಮುರಳೀಧರನ್ ಕಯಕ್ಕೂಟಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮಾತ್ರವಲ್ಲದೆ ಉದುಮ ಕ್ಷೇತ್ರದಿಂದ ಮನುಲಾಲ್ ಮೇಲತ್, ಕಾಞಂಗಾಡ್ ಕ್ಷೇತ್ರದಿಂದ ಬಾಲರಾಜ್ ಎಂ. ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ.












