ಸುಳ್ಯ:ದ.ಕ. ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟಬ್ ಬ್ರಿಜೇಶ್ ಚೌಟ ಮಾ.20ರಂದು ಸುಳ್ಯ ಮಂಡಲದಲ್ಲಿ ಪ್ರವಾಸ ಕೈಗೊಂಡಿದ್ದಾರೆ.ಬೆಳಗ್ಗೆ ಸುಳ್ಯಕ್ಕೆ ಆಗಮಿಸಿದ ಅವರು ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ

ಸುಳ್ಯ ನಗರಪಂಚಾಯತ್ ಆವರಣದಲ್ಲಿರುವ ಯುದ್ದ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಇಂದು ದಿನ ಪೂರ್ತಿ ಅವರು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಕಾರ್ಯಕರ್ತರ ಸಭೆ, ಪ್ರಮುಖರ ಭೇಟಿ ಕಾರ್ತಕ್ರಮ ಹಮ್ಮಿಕೊಂಡಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ಚುನಾವಣಾನಿರ್ವಹಣಾ ತಂಡದ ಸಂಚಾಲಕ ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ವಿನಯಕುಮಾರ್ ಕಂದಡ್ಕ ಮತ್ತಿತರರು ಜೊತೆಯಲ್ಲಿದ್ದರು.







