ನವದೆಹಲಿ: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ 111 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ತಕಟಿಸಿದೆ. ರಾಜ್ಯದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಿಸಿದೆ.ನವದೆಹಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ನಾಯಕರು ಪಟ್ಟಿ ಬಿಡುಗಡೆ ಮಾಡಿದರು.
ಬೆಳಗಾವಿಯಿಂದ
ಜಗದೀಶ್ ಶೆಟ್ಟರ್, ಚಿಕ್ಕಬಳ್ಳಾಪುರದಿಂದ ಕೆ. ಸುಧಾಕರ್, ಉತ್ತರಕನ್ನಡದಿಂದ ವಿಶ್ವೇಶ್ವರ ಹೆಗಡೆ ಹಾಗೂ ರಾಯಚೂರಿನಿಂದ ರಾಜಾ ಅಮರೇಶ್ವರ ನಾಯಕ ಅವರಿಗೆ ಟಿಕೆಟ್ ನೀಡಲಾಗಿದೆ. ಉತ್ತರಕನ್ನಡದಿಂದ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಈ ಸಲ ಟಿಕೆಟ್ ನೀಡಿಲ್ಲ. ಬದಲಿಗೆ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೆಟ್ ಘೋಷಿಸಲಾಗಿದೆ. ಹಿಮಾಚಲ ಪ್ರದೇಶದ ಮಂಡಿಯಿಂದ ಚಿತ್ರನಟಿ ಕಂಗನಾ ರನೌತ್ ಲೋಕಸಭೆಗೆ ಸ್ಫರ್ಧಿಸಲಿದ್ದಾರೆ. ದುಮ್ಕಾದಿಂದ ಸೀತಾ ಸೊರೆನ್, ಬೇಗುಸರಾಯ್ನಿಂದ ಗಿರಿರಾಜ್ ಸಿಂಗ್, ಪಾಟ್ನಾ ಸಾಹಿಬ್ನಿಂದ ರವಿಶಂಕರ್ ಪ್ರಸಾದ್, ಕುರುಕ್ಷೇತ್ರದಿಂದ ನವೀನ್ ಜಿಂದಾಲ್ ಸ್ಪರ್ಧಿಸಲಿದ್ದಾರೆ. ಸಂಬಲ್ಪುರದಿಂದ ಧರ್ಮೇಂದ್ರ ಪ್ರಧಾನ್, ಬಾಲಸೋರ್ನಿಂದ ಪ್ರತಾಪ್ ಸಾರಂಗಿ, ಪುರಿಯಿಂದ ಸಂಬಿತ್ ಪಾತ್ರ, ಭುವನೇಶ್ವರದಿಂದ ಅಪರಿಜಿತಾ ಸಾರಂಗಿ, ಮೀರತ್ನಿಂದ ಅರುಣ್ ಗೋವಿಲ್ ಸ್ಪರ್ಧಿಸಲಿರುವ ಪ್ರಮುಖರು.









