ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು (ಶುಕ್ರವಾರ) ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದೆ.ಆರಂಭಿಕ ಟ್ರೆಂಡ್ ಪ್ರಕಾರ ಎನ್ಡಿಎ ಮುನ್ನಡೆಯಲ್ಲಿದ್ದು, ಮಹಾಘಟಬಂಧನ ಮೈತ್ರಿ ಅಲ್ಪ ಹಿನ್ನಡೆಯಲ್ಲಿದೆ. ಇತ್ತೀಚಿನ ವರದಿ ಪ್ರಕಾರ ಎನ್ಡಿಎ 88 ಹಾಗೂ ಮಹಾಘಟಬಂಧನ 60 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಮೊದಲುಅಂಚೆ ಮತಪತ್ರಗಳ ಎಣಿಕೆ ನಡೆಯುತ್ತಿದ್ದು, ಬಳಿಕ ಇವಿಎಂನಲ್ಲಿನ ಮತ ಎಣಿಕೆ ನಡೆಯುತಿದ್ದು 38 ಜಿಲ್ಲೆಗಳ 48 ಕೇಂದ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿದೆ.243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು.
previous post





