ಸುಳ್ಯ:ಚಂದ್ರಶೇಖರ್ ಅಜಾದ್ ರಾವಣ ಅವರ ನೇತೃತದ ಭೀಮ್ ಆರ್ಮಿ ಭಾರತ್ ಏಕತಾ ಮಿಶನ್ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಾವೇಶ ಮತ್ತು ಜಿಲ್ಲಾ ಸಮಿತಿ ರಚನೆ ಕಾರ್ಯಕ್ರಮ ಬಿ ಸಿ ರೋಡ್ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ಭೀಮ್ ಆರ್ಮಿಯ
ರಾಜ್ಯ ಅಧ್ಯಕ್ಷ ರಾಜ್ ಗೋಪಾಲ್ ಡಿ ಎಸ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ, ಸಾಮಾಜಿಕ ಕಾರ್ಯಕರ್ತ ಕೆ.ಎಸ್.ಉಮ್ಮರ್ ಅವರು ಸಮಿತಿಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ವಿಭಾಗೀಯ ಉಸ್ತುವಾರಿಯಾಗಿ ರಾಜಾ ಚಂಡ್ತಿಮಾರ್, ಗೌರವಾಧ್ಯಕ್ಷರಾಗಿ ಅಣ್ಣು ಸಾಧನ, ಸುಂದರ್ ನಿಡ್ಪಳ್ಳಿ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಕಾಯರ್ತಡ್ಕ, ಉಪಾಧ್ಯಕ್ಷರುಗಳಾಗಿ ಕೆ.ಎಸ್.ಉಮ್ಮರ್,ಐವರ್ನಾಡಿನ ಕೊರಗಪ್ಪ ಕೊಯಿಲ,ಸುಂದರ್ ಕೊಯಿಲ, ನಾರಾಯಣ ಬೊಂಡಾಲ,ಖಜಾಂಚಿಯಾಗಿ ರತ್ನ ಕುಮಾರಿ ಜಿ ಕೋಡಿಂಬಾಳ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.












