ಸುಳ್ಯ:ನಿವೇದಿತಾ ಸಂಚಾಲನ ಸಮಿತಿ ಅಜ್ಜಾವರ. ಮಾತೃ ಸಂಸ್ಥೆ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯ ಇದರ ಅಶ್ರಯದಲ್ಲಿ ‘ಭಾರತ ಮಾತಾ ಪೂಜನ ಕಾರ್ಯಕ್ರಮ ಅಜ್ಜಾವರ ಶ್ರೀ ಶಂಕರ ಭಾರತಿ ವೇದಪಾಠ ಶಾಲೆ ಬಯಂಬು ಇಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ
ಮೇಲ್ವಿಚಾರಕರಾದ ವಿಶಾಲ ಮತ್ತು ಸಂಸ್ಕಾರ ಭಾರತೀಯ ಜಿಲ್ಲಾ ಕಾರ್ಯದರ್ಶಿ ಕುಸುಮಾಧರ.ಎ.ಟಿ. ಇವರು ಭಾರತ ಮಾತಾ ಪೂಜನ ಬಗ್ಗೆ ಬೌದ್ದಿಕ್ ನೀಡಿದರು. ಮಾತೃ ಸಂಸ್ಥೆ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ನ ಅಧ್ಯಕ್ಷೆಜಯ ಇಂದಿರಾ ರೈ, ಗುಣವತಿ ಕೊಲ್ಲಂತಡ್ಕ, ಶಶಿಕಲಾ ದುಗಲಡ್ಕ, ಜಯಂತಿ ಜನಾರ್ಧನ, ವಿಶ್ವ ಹಿಂದೂ ಪರಿಷತ್ ಅಜ್ಜಾವರ ಶಾಖೆ ಇದರ ಅಧ್ಯಕ್ಷ ನಾರಾಯಣ ಬಂಟ್ರಬೈಲು, ಅಜ್ಜಾವರ ನಿವೇದಿತಾ ಸಂಚಾಲನ ಸಂಚಾಲಕರಾದ ಕವಿತಾ ಪುರುಷೋತ್ತಮ,ಮತ್ತು ನಿವೇದಿತಾ ಸಂಚಾಲನದ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ಪುಷ್ಪ ರಾಜೇಶ್ ದೊಡ್ಡೇರಿ ಸ್ವಾಗತಿಸಿ, ವಿಶಾಲ ಸೀತಾರಾಮ ಕರ್ಲಪಾಡ್ಡಿ ವೈಯಕ್ತಿಕ ಗೀತೆ ಹಾಡಿದರು. ಜಯಶ್ರೀ ನಾಗೇಶ್ ಬೇಲ್ಯ ಕಾರ್ಯಕ್ರಮ ನಿರೂಪಿಸಿದರು.