ಹೈದರಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಕರ್ನಾಟಕದ ಪ್ರಯಾಣ ಪೂರ್ತಿ ಮಾಡಿದೆ.ಅ.30 ರಂದು ಕರ್ನಾಟಕ ಪ್ರವೇಶಿಸಿದ್ದ ಭಾರತ್ ಜೋಡೋ ಯಾತ್ರೆ 24 ದಿನಗಳ ಬಳಿಕ ರಾಯಚೂರಿನಿಂದ ನಿರ್ಗಮಿಸಿ ಬಳಿಕ ಭಾನುವಾರ ಬೆಳಿಗ್ಗೆ
ತೆಲಂಗಾಣದ ಗುಡೆಬೆಳ್ಳೂರು ಪ್ರವೇಶಿಸಲಿದೆ.ಮಹೆಬೂಬನಗರ ಜಿಲ್ಲೆಯ ಗುಡೆಬೆಳ್ಳೂರಿನಿಂದ ಯಾತ್ರೆ ಆರಂಭವಾಗಲಿದೆ. ಕರ್ನಾಟಕ–ತೆಲಂಗಾಣ ಗಡಿ ಭಾಗದಲ್ಲಿ ಸ್ವಾಗತಕ್ಕೆ ತೆಲಂಗಾಣ ಕಾಂಗ್ರೆಸ್ ಘಟಕ ಅದ್ದೂರಿ ಸಿದ್ಧತೆ ಮಾಡಿಕೊಂಡಿದೆ.ಗುಡೆಬೆಳ್ಳೂರಿನಲ್ಲಿ ಬೆಳಗ್ಗಿನ ಉಪಹಾರ ಸೇವಿಸಿದ ಬಳಿಕ, ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಅ.23 ರಿಂದ 26ರವರೆಗೆ ಯಾತ್ರೆಗೆ ವಿರಾಮ ನೀಡಲಾಗಿದೆ ಎಂದು ಟಿಪಿಸಿಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಅ.27ರಂದು ಗುಡೆಬೆಳ್ಳೂರಿನಿಂದ ಯಾತ್ರೆ ಆರಂಭಗೊಂಡು, 16 ದಿನ ತೆಲಂಗಾಣದಲ್ಲಿ ಸಂಚರಿಸಲಿದೆ. ನ.7ರಂದು ಮಹಾರಾಷ್ಟ್ರ ಪ್ರವೇಶಿಸಲಿದೆ.