ಸುಳ್ಯ:ಕೃಷಿಗೆ, ಕೃಷಿಕರಿಗೆ ಪ್ರೋತ್ಸಾಹ ನೀಡುವ ಆಗ್ರೋ ಸಂಸ್ಥೆ ಸುಳ್ಯದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದೆ. ಕೃಷಿಕರಿಗೆ ಅನಿವಾರ್ಯವಾಗಿರುವ ಆಗ್ರೋ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಶುಭ ಹಾರೈಸಿಸರು. ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ
ಸುಳ್ಯದ ಪ್ರಥಮ ಕೃಷಿ ಪರಿಕರಗಳ ಮಳಿಗೆ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್ನ ಸುವರ್ಣ ಮಹೋತ್ಸವ ಸಂಭ್ರಮ ‘ಆಗ್ರೋ ‘ಸುವರ್ಣ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐವತ್ತು ವರ್ಷದ ಆಗ್ರೋ ಸಾಧನೆಯ ಅವಲೋಕನ ಮಾಡಿದ

ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ ಮಾತನಾಡಿ
‘ಕೃಷಿಗೆ ಭವಿಷ್ಯ ಇದೆ ಎಂದು ಆಗ್ರೋ ಸುವರ್ಣ ಸಂಭ್ರಮದ ವೇದಿಕೆಯ ಮೂಲಕ ಸಂದೇಶ ನೀಡಿದೆ ಎಂದು ಹೇಳಿದರು. ದೆಹಲಿಯಲ್ಲಿ ರೈತರು ಪ್ರತಿಭಟನೆಯ ಹಾದಿ ಹಿಡಿದಿರುವ ಸಂದರ್ಭದಲ್ಲಿ, ರಾಜ್ಯದ ಕೃಷಿಕರು ಬರಗಾಲದಿಂದ ಕಂಗೆಟ್ಟಿರುವ ಸಂದರ್ಭದಲ್ಲಿ, ಅಡಿಕೆ ಹಳದಿ ರೋಗ, ಬೆಲೆ ಕುಸಿತದಿಂದ ಜನರು ಕಂಗೆಟ್ಟಿರುವ ಸಂದರ್ಭದಲ್ಲಿ ಯುವ ಕೃಷಿಕರನ್ನು ಕರೆಸಿ ಆಗ್ರೋ ಕೃಷಿ ಚಿಂತನ ಗೋಷ್ಠಿ ನಡೆಸುವ ಮೂಲಕ ಉತ್ತಮ ಸಂದೇಶ ನೀಡಿದೆ ಎಂದು ಅವರು ಹೇಳಿದರು.ಸುಳ್ಯ ತಾಲೂಕು ಸಮೃದ್ಧವಾಗಲು ಆಗ್ರೊ ಸಂಸ್ಥೆಯು ದೊಡ್ಡ ಕೊಡುಗೆ ನೀಡಿದೆ. ಇವರ ಆಲೋಚನೆ ಮತ್ತು ಪ್ರಯೋಗದಿಂದ ಸ್ಪ್ರಿಂಕ್ಲರ್ಗಳ ಮೂಲಕ ತೋಟಕ್ಕೆ ನೀರಾವರಿ ಒದಗಿಸಿದ್ದು ದೊಡ್ಡ ಸಾಧನೆ. ಸ್ನೇಹ, ಪ್ರೀತಿ, ವಿಶ್ವಾಸವನ್ನು ಉಳಿಸಿ ಜನಪ್ರಿಯತೆ ಗಳಿಸಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತ ದುರ್ಗಾಕುಮಾರ್ ನಾಯರ್ಕೆರೆ ನಿರ್ದೇಶಿಸಿದ ಆಗ್ರೋ ಸಾಕ್ಷ್ಯಚಿತ್ರವನ್ನು ರೋಟರಿ ಜಿಲ್ಲಾ ಮಾಜಿ ಗವರ್ನರ್ ಸುರೇಶ್ ಚಂಗಪ್ಪ ಬಿಡುಗಡೆಗೊಳಿಸಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ ಹಾಗೂ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭಾಗವಹಿಸಿದ್ದರು.

ಹಿರಿಯ ಸಾಧಕರಿಗೆ ಆಗ್ರೋ ಗೌರವ ಸನ್ಮಾನ:
ಆಗ್ರೋ ಸುವರ್ಣ ಸಂಭ್ರಮ ಉದ್ಘಾಟನಾ ಸಂದರ್ಭದಲ್ಲಿ ನಾಡಿನ ಐದು ಮಂದಿ ಹಿರಿಯ ಸಾಧಕರಿಗೆ ಆಗ್ರೋ ಗೌರವ ಸನ್ಮಾನ ನೀಡಲಾಯಿತು. ಪದಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಡಾ.ಗಿರೀಶ್ ಭಾರದ್ವಾಜ್, ಗ್ರೀನ್ ಗೀರೋ ಆಫ್ ಇಂಡಿಯಾ ಡಾ. ಆರ್.ಕೆ.ನಾಯರ್, ಹಿರಿಯ ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ಮಾಪಲತೋಟ, ಗೋಣಿಕೊಪ್ಪ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎಂ. ಗೌರಿ ಶಂಕರ್ ಹಾಗೂ ಹಿರಿಯ ಕೃಷಿಕರಾದ ಸಂಪಾಜೆಯ ಶಂಕರ್ ಪ್ರಸಾದ್ ರೈ ಇವರನ್ನು ಸನ್ಮಾನಿಸಿ ಗೌರವಿಸಲಾತು.

ರೋಟರಿ, ಲಯನ್ಸ್, ಇನ್ನರ್ವೀಲ್ ಕ್ಲಬ್, ಫಿನೋಲೆಕ್ಸ್ ಕಂಪೆನಿ ಸೇರಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಗ್ರೋ ರಾಮಚಂದ್ರ ಹಾಗೂ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್ನ ಮಾಲಕರಾದ ರಾಮಚಂದ್ರ ಪಿ., ಮಂಜುಳಾ ರಾಮಚಂದ್ರ, ಸನತ್.ಪಿ.ಆರ್, ದಿವ್ಯ ಸನತ್, ಸಿದ್ಧಾರ್ಥ್, ಸನಿಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಮಚಂದ್ರ.ಪಿ ಸ್ವಾಗತಿಸಿ, ಸನತ್ ಪಿ.ಆರ್ ವಂದಿಸಿದರು. ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.
















